Advertisement
ಲಸಿಕೆ ಪಡೆದುಕೊಳ್ಳುವುದು ಹೆಮ್ಮೆಯ ಸಂಗತಿ ಹಾಗೂ ಜಾಣರ ಲಕ್ಷಣ. ಹಿರಿಯರು ಹೇಳಿದಂತೆ ರೋಗ ಬಂದ ಮೇಲೆ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಉತ್ತಮ. ಇಲ್ಲೂ ಹಾಗೆ. ಕೊರೊನಾ ಸೋಂಕಿನ ಅಪಾಯಕ್ಕೆ ಸಿಲುಕಿ ಕಷ್ಟಪಡುವುದಕ್ಕಿಂತ ಆ ಸೋಂಕಿ ನಿಂದ ನಮ್ಮನ್ನು ಸುರಕ್ಷಿತವಾಗಿಸಿಕೊಳ್ಳುವುದೇ ಉತ್ತಮ. ಆದ್ದರಿಂದ ಎಲ್ಲ ಮನೆಯಲ್ಲೂ ಅರ್ಹರಿಗೆ ಲಸಿಕೆ ಹಾಕಿಸಿಕೊಳ್ಳಲು ಮುಂದಾದರೆ ಸರಕಾರದ ಉದ್ದೇಶ ಸುಲಭವಾಗಿ ಈಡೇರಬಹುದು. ಮನೆಯಲ್ಲಿರುವ ವಿದ್ಯಾವಂತರು ಹಿರಿಯರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಈಗೀಗ ಮನೆಮಂದಿ, ಸಂಬಂಧಿಕರು ಅಥವಾ ಇಡೀ ಕುಟುಂಬದವರ ವಾಟ್ಸಾಪ್ ಗ್ರೂಪ್‌ಗ್ಳಿರುತ್ತವೆ. ಲಸಿಕೆ ಪಡೆದವರ ಬಗ್ಗೆ ಮಾಹಿತಿ ಹಂಚಿಕೊಂಡು ಇತರರಿಗೆ ಪ್ರೇರಣೆಯಾಗುವಂತೆ ಮಾಡಬೇಕು. ಲಸಿಕೆಯ ಮಹತ್ವವನ್ನು ಗ್ರೂಪ್‌ಗ್ಳಲ್ಲಿ ಹಂಚಿಕೊಳ್ಳಿ. ನಮ್ಮ ಮನೆಯ ಅರ್ಹರೆಲ್ಲರೂ ಲಸಿಕೆ ಪಡೆದವರು ಎಂದು ಹೆಮ್ಮೆಪಡುವ ಅವಕಾಶವನ್ನು ಸೃಷ್ಟಿಸಿಕೊಳ್ಳೋಣ. ಪಡೆದರೆ ಲಸಿಕೆ ಮತ್ತಿಲ್ಲ ಕೋವಿಡ್ ಹೆದರಿಕೆ.
Related Articles
Advertisement
ಹಿಂದೆ ಪಿಟ್ಸ್ ರೋಗದಿಂದ ನರಳುತ್ತಿದ್ದು, ಗುಣಮುಖ ನಾಗಿದ್ದೇನೆ. ನಾನು ಲಸಿಕೆ ಪಡೆಯಬಹುದೇ? -ರಾಜೇಶ್ ರಾವ್, ಎರ್ಮಾಳ್
– ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆದವರು ಹಾಗೂ ಪಡೆಯುತ್ತಿರುವವರು ಲಸಿಕೆ ಚುಚ್ಚಿಸಿಕೊಳ್ಳಬಹುದು. ಆದರೆ ಅದಕ್ಕಿಂತ ಮೊದಲು ತಮ್ಮ ಮೆಡಿಕಲ್ ದಾಖಲೆಗಳನ್ನು ತೋರಿಸಿ ತಜ್ಞ ವೈದ್ಯರಲ್ಲಿ ಚರ್ಚಿಸುವುದು ಒಳಿತು.
ಜೂ.30ಕ್ಕೆ 60 ವರ್ಷ ತುಂಬುವವರು ಲಸಿಕೆ ಪಡೆಯಬಹುದೇ? ಬಿಪಿ, ಶುಗರ್ ರೋಗಿಗಳಲ್ಲಿ ಲ್ಯಾಬ್ ವರದಿ ಇದ್ದರೆ ಸಾಕೇ -ಶರತ್ಚಂದ್ರ, ಕುಂದಾಪುರ
– 2022ಕ್ಕೆ 60 ವರ್ಷ ತುಂಬುವವರೂ ಈಗ ಲಸಿಕೆ ತೆಗೆದುಕೊಳ್ಳಬಹುದು. ಬಿಪಿ, ಸಕ್ಕರೆ ರೋಗಿಗಳು ತಮ್ಮ ವೈದ್ಯರಿಂದ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು.
ಲಸಿಕೆಗೆ ಮೊದಲು ಆಹಾರ ಸೇವನೆ ಕಡ್ಡಾಯವೇ? -ನಾಗವೇಣಿ, ಪುತ್ತೂರು
– ಆಹಾರ ಸೇವನೆ ಕಡ್ಡಾಯವಾಗಿದೆ. ಆಹಾರ ಸೇವಿಸಿರದಿದ್ದರೆ ಲಸಿಕೆ ಪರಿಣಾಮಕಾರಿಯಾಗದು. ತಲೆಸುತ್ತು ಸಾಧ್ಯತೆಯೂ ಇದೆ.
2 ವಿಧದ ಲಸಿಕೆಗಳಿದ್ದು, ಆಯ್ಕೆಗೆ ಅವಕಾಶವಿದೆಯೇ? -ರವಿ, ಮಣಿಪಾಲ
– ಲಭ್ಯವಿರುವಲ್ಲಿ ಲಸಿಕೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವರ್ಷವೂ ಲಸಿಕೆ ಪಡೆಯಬೇಕೇ? -ಶಶಿ, ಹೆಬ್ರಿ
– ಈಗ ನೀಡುತ್ತಿರುವ ಲಸಿಕೆ 1 ವರ್ಷದವರೆಗೆ ರೋಗನಿರೋಧಕ ಶಕ್ತಿ ನೀಡುತ್ತದೆ. ಅನಂತರವೂ ನಮ್ಮನ್ನು ರೋಗಗಳಿಂದ ರಕ್ಷಿಸಲಿದೆ. ನಿರಂತರ ಲಸಿಕೆ ನೀಡುವ ಬಗ್ಗೆ ಸರಕಾರ ನಿರ್ಧರಿಸಿಲ್ಲ.
ಲಸಿಕೆ ತೆಗೆದುಕೊಳ್ಳಲು ಯಾವುದೇ ಭಯಪಡುವ ಅಗತ್ಯವಿಲ್ಲ. ನಾನು ಲಸಿಕೆ ಪಡೆದುಕೊಂಡಿದ್ದು, ಬಳಿಕ ತುಂಬಾ ರಿಲ್ಯಾಕ್ಸ್ ಮೂಡ್‌ನಲ್ಲಿದ್ದೇನೆ. ಯಾವುದೇ ಅಡ್ಡ ಪರಿಣಾಮವಾಗಿಲ್ಲ. ನನಗಿದ್ದ ಮೈಕೈ ನೋವು ಕೂಡ ಲಸಿಕೆ ಪಡೆದ ಕಡಿಮೆಯಾಗಿದೆ. ಆದ್ದರಿಂದ ಇದು ಖಂಡಿತವಾಗಿಯೂ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. -ಜಾನಕಿ ಎಸ್. ಅಂಚನ್ ಆರ್ಯಾಡಿ ಸಮಾಜಸೇವಕರು, ಪಾಂಗಾಳ
ಕೋವಿಡ್ ಸೋಂಕನ್ನು ದೇಶದಿಂದ ಹೊಡೆದೋಡಿಸಲು ಲಸಿಕೆ ತೆಗೆದುಕೊಳ್ಳುವುದು ಅತೀ ಅವಶ್ಯ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗುವುದಿಲ್ಲ. ಸಂಜೆ 4 ಗಂಟೆ ವೇಳೆಗೆ ಲಸಿಕೆ ಪಡೆದಿದ್ದ ನಾನು ಮರುದಿನ ಎಂದಿನಂತೆ ಕಚೇರಿ ಕೆಲಸಕ್ಕೆ ತೆರಳಿದ್ದೇನೆ. ಪ್ರತಿಯೊಬ್ಬರೂ ಕೋವಿಡ್ ನಿರೋಧಕ ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು. -ಜಯಪ್ರಕಾಶ್ ಹೆಗ್ಡೆ, ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ