Advertisement

ಸಾವಿನಿಂದ ರಕ್ಷಣೆ ನೀಡಿದ ಲಸಿಕೆ

11:09 PM Sep 30, 2021 | Team Udayavani |

ಹೊಸದಿಲ್ಲಿ: “ಸಾವಿನಿಂದ ರಕ್ಷಣೆ ನೀಡುವಲ್ಲಿ ಕೊರೊನಾ ಲಸಿಕೆಯ ಪಾತ್ರವೆಷ್ಟು’ ಎಂಬು ದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನೀಡಿರುವ ದತ್ತಾಂಶವೇ ಸ್ಪಷ್ಟಪಡಿಸಿದೆ.

Advertisement

ಸೋಂಕಿನ ಎರಡನೇ ಅಲೆಯ ಮೊದಲ 7 ವಾರಗಳಲ್ಲಿ, 60 ವರ್ಷ ದಾಟಿದವರಲ್ಲಿ ಲಸಿಕೆ ಪಡೆಯದವರ ಸಾವಿನ ಸಂಖ್ಯೆ ವಾರಕ್ಕೆ 10 ಲಕ್ಷ ಮಂದಿಯಲ್ಲಿ 121 ಆಗಿತ್ತು. ಮೊದಲ ಡೋಸ್‌ ಪಡೆದ 10 ಲಕ್ಷ ಮಂದಿಯಲ್ಲಿ 2.6 ಮಂದಿಯಷ್ಟೇ(ವಾರಕ್ಕೆ) ಸಾವಿಗೀಡಾಗಿ ದ್ದರು. ಇನ್ನು ಎರಡೂ ಡೋಸ್‌ ಪಡೆದ 10 ಲಕ್ಷ ಮಂದಿಯಲ್ಲಿ 1.76 ಮಂದಿ ಮಾತ್ರ ಕೊರೊನಾಗೆ ಬಲಿಯಾಗಿದ್ದರು.

ಸದ್ಯದಲ್ಲೇ ಅನಾವರಣಗೊಳ್ಳಲಿರುವ ವ್ಯಾಕ್ಸಿನ್‌ ಟ್ರ್ಯಾಕರ್‌ನಲ್ಲಿ ಸೇರಿಸುವ ಸಲು ವಾಗಿ ಈ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ವಿಶೇಷವೆಂದರೆ, ಸೋಂಕಿಗೆ ಅತೀ ಬೇಗನೆ ಒಳಗಾಗಬಲ್ಲ 60+ ವಯೋಮಾನದ ಜನ ಸಂಖ್ಯೆಯ ಪೈಕಿ ಶೇ.24ರಷ್ಟು ಮಂದಿ ಇನ್ನೂ ಲಸಿಕೆ ಪಡೆದಿಲ್ಲ.

ಇತ್ತೀಚೆಗಿನ ದತ್ತಾಂಶಗಳ ಪ್ರಕಾರ, 60 ವರ್ಷ ದಾಟಿದವರ ಪೈಕಿ 10.09 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದು, 5.58 ಕೋಟಿ ಮಂದಿ ಎರಡೂ ಡೋಸ್‌ ಪಡೆದಿದ್ದಾರೆ. ಎ.18ರಿಂದ ಆ.15ರವರೆಗೆ ಸಂಗ್ರಹಿಸಿರುವ ದತ್ತಾಂಶಗಳನ್ನು ನೋಡಿದರೆ, ಮೊದಲ ಡೋಸ್‌ ಪಡೆದ ಬಳಿಕ ಸಾವಿನಿಂದ ಶೇ.96. 6ರಷ್ಟು ರಕ್ಷಣೆ ದೊರೆತರೆ, ಎರಡೂ ಡೋಸ್‌ ಪಡೆದರೆ ಶೇ.97.5ರಷ್ಟು ರಕ್ಷಣೆ ಸಿಗುತ್ತದೆ ಎಂಬುದು ಸಾಬೀತಾಗಿದೆ. ಈ ಅವಧಿಯಲ್ಲಿ ದೇಶಾ ದ್ಯಂತ 2,52,873 ಸಾವು ಸಂಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next