Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವತಿಯಿಂದ 31 ವಾರ್ಡ್ ವ್ಯಾಪ್ತಿಯಲ್ಲಿ ಬಡಜನರಿಗೆ ಕಿಟ್ ವಿತರಣೆ ಮಾಡುವಲ್ಲಿ ಕೂಡ ಇದೇ ರೀತಿ ತಾರತಮ್ಯ ಮಾಡಲಾಗಿದೆ. ಮೊದಲು ತಮ್ಮ ಪಕ್ಷದವರಿಗೆ ಕೊಟ್ಟು ಉಳಿದಿದ್ದರೆ ಮಾತ್ರ ಇತರ ಪಕ್ಷದ ಅನುಯಾಯಿಗಳಿಗೆ ಸಿಕ್ಕಿದೆ. ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪಕ್ಷಬೇಧ ಮರೆತು ಕೆಲಸ ಮಾಡುವ ಮನಸ್ಥಿತಿ ಶಾಸಕರು ಬೆಳೆಸಿಕೊಳ್ಳದೆ ಇರುವುದು ದುರಂತದ ಸಂಗತಿ ಎಂದರು.
Related Articles
Advertisement
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ . ಆರ್.ಜಯಂತ್ ಮಾತನಾಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಗ್ಗೆ ರಾಜ್ಯದ ಆರೋಗ್ಯ ಸಚಿವರೇ ಅಪಸ್ವರ ಎತ್ತಿದ್ದಾರೆ. ಐಸಿಯುಗೆ ದಾಖಲಾದ ಶೇ. 50ರಷ್ಟು ರೋಗಿಗಳು ಮೃತಪಟ್ಟಿದ್ದಾರೆ. ಮೆಗ್ಗಾನ್ ವೈದ್ಯರು ಸಹಿ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಾರೆ ಎಂದು ಆರೋಗ್ಯ ಸಚಿವರೇ ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ಆರೈಕೆ ಸಿಕ್ಕಿದ್ದರೆ ನೂರಾರು ಕೊರೊನಾ ಸೋಂಕಿತರ ಪ್ರಾಣ ಉಳಿಯುತ್ತಿತ್ತು. ಮೆಗ್ಗಾನ್‌ನಲ್ಲಿ ನಡೆದ ಘಟನೆ ಚಾಮರಾಜನಗರಕ್ಕಿಂತ ಘೋರವಾದದ್ದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಾವಿಗೆ ಹೊಣೆಗಾರಿಕೆಯನ್ನು ನಿಗದಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರ ಬ್ಲಾಕ್ ಅಧ್ಯಕ್ಷ ಐ.ಎನ್. ಸುರೇಶಬಾಬು ಮಾತನಾಡಿದರು. ಗೋಷ್ಠಿಯಲ್ಲಿ ಪ್ರಮುಖರಾದ ಅನಿತಾಕುಮಾರಿ, ಮಧುಮಾಲತಿ, ತಸ್ರಿಫ್ ಇಬ್ರಾಹಿಂ, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ತುಕಾರಾಮ್ ಬಿ. ಶಿರವಾಳ ಇದ್ದರು.
ಮೆಗ್ಗಾನ್ ಪ್ರಕರಣದಹಿನ್ನೆಲೆಯಲ್ಲಿ ಆರೈಕೆ, ಆಕ್ಸಿಜನ್, ಲಸಿಕೆ ಸಮರ್ಪಕವಾ ಗಿದ್ದರೆ ಶೇ. 90ರಷ್ಟು ಜನರನ್ನು ರಕ್ಷಿಸಬಹು ದಿತ್ತು ಎಂಬ ರಾಹುಲ್ ಗಾಂಧಿಯವರ ಮಾತು ಸತ್ಯ ಎಂಬುದು ಗೊತ್ತಾಗುತ್ತದೆ.- ಬಿ.ಆರ್. ಜಯಂತ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸರ್ಕಾರ ಹಠ ಮಾಡುತ್ತಿದೆ. ಕೊನೆಪಕ್ಷ ಎಸ್ ಎಸ್‌ಎಲ್‌ಸಿ ಮಕ್ಕಳಿಗೆ ಹಾಗೂಶಿಕ್ಷಕರಿಗೆ ಲಸಿಕೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ಪೋಷಕರನ್ನು ತೀವ್ರ ಆತಂಕಕ್ಕೆಈಡು ಮಾಡಿದೆ.-ಐ.ಎನ್. ಸುರೇಶ್‌ಬಾಬು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ