Advertisement

ಲಸಿಕೆ ಪಡೆಯಲು ಜನರ ನಿರಾಸಕ್ತಿ

06:02 PM Apr 05, 2021 | Team Udayavani |

ಹಾವೇರಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಆತಂಕ ಮೂಡಿಸಿದ್ದರೂ ಸಾರ್ವಜನಿಕರುಕೋವಿಡ್ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ.ಅಲ್ಲದೇ, ಜಿಲ್ಲೆಯಲ್ಲಿ ಕೊರೊನಾ ಮಾರ್ಗಸೂಚಿಪಾಲಿಸುವಲ್ಲೂ ಸಾರ್ವಜನಿಕರ ನಿರಾಸಕ್ತಿ ಎದ್ದು ಕಾಣಿಸುತ್ತಿದೆ.

Advertisement

ಜಿಲ್ಲೆಯಲ್ಲಿ ಜನರು ಮಾಸ್ಕ್ ಬಳಕೆ ಮರೆತು ಹೊದಂತಿದೆ. ಸ್ಯಾನಿಟೈಸರ್‌ ಬಳಕೆಯಂತೂಇಲ್ಲವೇ ಇಲ್ಲ. ಹೀಗಾಗಿ, ಕೊರೊನಾ ಎರಡನೇಅಲೆಯ ಭೀತಿ ಹೆಚ್ಚಾಗಿದೆ. 60 ವರ್ಷ ಮೇಲ್ಪಟ್ಟಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ45 ರಿಂದ 60 ವರ್ಷದೊಳಗಿನ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 74,666 ಜನರು ಲಸಿಕೆ ಪಡೆದಿದ್ದಾರೆ.

ಕಳೆದ ಮಾ.1ರಿಂದ ಸಾರ್ವಜನಿಕರಿಗೂ ಕೋವಿಡ್ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ250ರೂ. ನಿಗದಿಪಡಿಸಿ ಸರ್ಕಾರ ನೀಡುವ ಪ್ರಕ್ರಿಯೆ ಶುರು ಮಾಡಿದೆ. ಕೋವಿಡ್ ಸೋಂಕಿನ ಹಾವಳಿ ಜೋರಿದ್ದಾಗ ಯಾವಾಗ ಲಸಿಕೆಬರುತ್ತದೋ ಎಂದು ಕಾಯುತ್ತಿದ್ದವರು ಈಗ ಲಸಿಕೆ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ.ಜನಪ್ರತಿನಿಧಿಗಳು ಲಸಿಕೆ ಪಡೆದು ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರೂ ಜನರು ಮುಂದೆ ಬರುತ್ತಿಲ್ಲ. ಇದರಿಂದ ಲಸಿಕೆ ನೀಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸುತ್ತಿಲ್ಲ. ಲಸಿಕೆ ಪಡೆದವರ ಪೈಕಿ ಯಾರಿಗೂಸೈಡ್‌ ಎಫೆಕ್ಟ್ ಆದ ಉದಾಹರಣೆ ಇಲ್ಲ. ಆದರೂ,ಜನ ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ.

ಜಿಲ್ಲೆಯಲ್ಲಿ 45ರಿಂದ 60 ವರ್ಷದ 17,624 ಜನ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ39,282 ಹಿರಿಯ ನಾಗರಿಕರು ಲಸಿಕೆ ಪಡೆದಿದ್ದಾರೆ.ಜಿಲ್ಲೆಯಲ್ಲಿ 18 ಲಕ್ಷ ‌ ಜನಸಂಖ್ಯೆಯಿದ್ದು,ಇವರಲ್ಲಿ ಲಸಿಕೆ ನೀಡಲು ಶೇ.30ರಷ್ಟು ಜನರು ಅರ್ಹರಾಗಿದ್ದಾರೆ. ಅಂದರೆ, ಸುಮಾರು 5 ಲಕ್ಷ ‌ಜನರಿಗೆ ಲಸಿಕೆ ಹಾಕಬೇಕಿದೆ. ಆದರೆ, ಈವರೆಗೆಕೇವಲ ಶೇ.32ರಷ್ಟೂ ಪ್ರಗತಿ ಸಾಧಿಸಿದೆ.

2ನೇ ಹಂತದ ಲಸಿಕೆ ಪ್ರಗತಿಯೂ ಕುಂಠಿತ: ಕಳೆದ ಜ.16ರಿಂದ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಾರಿಯರ್ಸ್‌ಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿತ್ತು. ಜಿಲ್ಲೆಯಲ್ಲಿ 8509 ವಾರಿಯರ್ಸ್‌ಗೆ ಲಸಿಕೆನೀಡುವ ಗುರಿಯಿತ್ತು. ಅವರಲ್ಲಿ 7302 ಜನಮೊದಲ ಡೋಸ್‌ ಲಸಿಕೆ ಪಡೆದಿದ್ದು, ಶೇ.86ರಷ್ಟು ಪ್ರಗತಿ ಸಾಧಿಸಲಾಗಿದೆ. 4677 ಜನ 2ನೇ ಡೋಸ್‌ ಪಡೆದಿದ್ದು, ಶೇ.65ರಷ್ಟು ಪ್ರಗತಿಯಾಗಿದೆ.

Advertisement

ಎರಡನೇ ಅಲೆ ಆತಂಕ :

ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು.ಆದರೆ, ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳುಕಂಡು ಬರುತ್ತಿವೆ. ಇದುವರೆಗೆ ಜಿಲ್ಲೆಯಲ್ಲಿ ನಿತ್ಯ ಒಂದಕ್ಕಿಯ ಕೋವಿಡ್ ಪ್ರಕರಣಗಳುಪತ್ತೆಯಾಗುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಸಾರ್ವಜನಿಕರಿಗೆ ಸರ್ಕಾರದಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿಜನರು ಲಸಿಕೆ ಪಡೆಯುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲುಕ್ರಮ ಕೈಗೊಳ್ಳಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಮತ್ತು45-60 ವರ್ಷದೊಳಗಿನ ಆರೋಗ್ಯ ಸಮಸ್ಯೆಯಿರುವವರು ಹತ್ತಿರದ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಲು ಮುಂದಾಗಬೇಕು. -ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next