Advertisement
ಲಸಿಕೆ ಹಂಚಿಕೆಗಾಗಿ ಅಂಗನವಾಡಿಗಳು, ಶಾಲೆಗಳು, ಪಂಚಾಯತ್ ಮತ್ತು ಇತರ ಸರಕಾರಿ ಕಟ್ಟಡಗಳನ್ನು ಬಳಸಲು ನಿರ್ಧರಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಘಟಕಗಳನ್ನೂ ಉಪಯೋಗಿಸಲಾಗುತ್ತದೆ ಎಂದು ಕೇಂದ್ರ ಸರಕಾರಿ ಮೂಲಗಳು ಹೇಳಿವೆ.
Related Articles
ಮೊದಲು ಲಸಿಕೆ ನೀಡುವ ಸಲುವಾಗಿ 30 ಕೋಟಿ ಮಂದಿಯನ್ನು ಗುರುತಿಸಲಾಗಿದೆ. ಅವರೆಂದರೆ,
1. ಆರೋಗ್ಯ ಸೇವೆಯಲ್ಲಿರುವ 1 ಕೋಟಿ ವೈದ್ಯರು, ಎಂಬಿಬಿಎಸ್ ವಿದ್ಯಾರ್ಥಿಗಳು, ನರ್ಸ್‌ಗಳು ಮತ್ತು ಆಶಾಕಾರ್ಯಕರ್ತೆಯರು.
2. 2 ಕೋಟಿ ಮುಂಚೂಣಿ ಕಾರ್ಯಕರ್ತರು.
3. ಪೊಲೀಸರು ಮತ್ತು ಸೇನಾ ಸಿಬಂದಿ.
4. 50 ವರ್ಷಕ್ಕಿಂತ ಮೇಲ್ಪಟ್ಟ 26 ಕೋಟಿ ಮಂದಿ.
5. ಇತರ ಅನಾರೋಗ್ಯಗಳನ್ನು ಹೊಂದಿರುವವರು.
Advertisement
ಕೋವಿಡ್ ಬೂತ್ಲಸಿಕೆ ಹಂಚಿಕೆ ಬಗ್ಗೆ ತಜ್ಞರ ಸಮಿತಿ ನೀಲನಕ್ಷೆ ರೂಪಿಸಿದೆ. ಇದರ ಪ್ರಕಾರ, ಲಸಿಕೆ ನೀಡುವುದಕ್ಕಾಗಿ ರಾಜ್ಯ ಸರಕಾರಗಳು ಸರಕಾರಿ ಕಟ್ಟಡಗಳನ್ನು ಗುರುತಿಸಬೇಕು. ಇವುಗಳನ್ನು ಕೊರೊನಾ ಲಸಿಕೆ ಬೂತ್‌ಗಳನ್ನಾಗಿ ಪರಿವರ್ತಿಸಬೇಕು. ಈಗಿರುವ ಸಾರ್ವಜನಿಕ ಲಸಿಕೆ ಕಾರ್ಯಕ್ರಮದ ಜತೆಯಲ್ಲೇ ಈ ಅಭಿಯಾನವನ್ನೂ ನಡೆಸಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಆರೋಗ್ಯ ಕೇಂದ್ರಗಳು ಅಥವಾ ಘಟಕಗಳ ಜತೆಗೆ ಅಂಗನವಾಡಿ ಕಟ್ಟಡ, ಶಾಲೆಗಳು, ಪಂಚಾಯತ್ ಕಟ್ಟಡಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆಯಾಗಬೇಕು ಎಂಬುದು ಸಮಿತಿಯ ಅಭಿಪ್ರಾಯ.