Advertisement
ಈಗ ಅದೇ ಸಂಘಸಂಸ್ಥೆಗಳು ಇನ್ನಷ್ಟು ಹೆಚ್ಚು ಜವಾಬ್ದಾರಿ, ಕಾಳಜಿಯನ್ನು ತೋರಿಸಬೇಕಾಗಿದೆ. ಕೋವಿಡ್ ಆರಂಭದ ದಿನದಲ್ಲಿ ಧೈರ್ಯ, ಸಾಂತ್ವನ ಹೇಳಿದ್ದ ಇವುಗಳು ಈಗ ಲಸಿಕೆ ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ತಮ್ಮ ವ್ಯಾಪ್ತಿಯಿಂದ ಗರಿಷ್ಠ ಸಂಖ್ಯೆಯ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿ ತಮ್ಮ ಸದಸ್ಯರ ಒಂದು ಗುಂಪು ಮಾಡಿಕೊಂಡು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಣೆ ಮಾಡುವುದು ಹಾಗೂ ಲಸಿಕೆ ಸಿಗುವ ಸ್ಥಳಗಳ ಬಗ್ಗೆ ಮಾಹಿತಿ ಮಾಡುವುದು ಅತಿ ಮುಖ್ಯವಾಗಿದೆ. ಅದರ ಪರಿಣಾಮವಾಗಿ ಮುಂದೆ ಕೊರೊನಾ ವಿರುದ್ಧ ದೊಡ್ಡ ಹೋರಾಟ ಮಾಡಿ ಗೆದ್ದ ಖುಷಿಯನ್ನು ಅನುಭವಿಸುವ ಅವಕಾಶ ನಮ್ಮ ಪಾಲಿಗೆ ಒದಗಿ ಬರಲಿದೆ. ಆದ್ದರಿಂದ ಪ್ರತಿಯೊಂದು ಊರಿನ ಸಂಘ ಸಂಸ್ಥೆಗಳು, ಯುವಕ – ಯುವತಿ ಮಂಡಲಗಳು ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಬೇಕಿದೆ. ಇದಕ್ಕಾಗಿ ಈಗ ನೀಡುವ ಸಮಯವು ಮುಂದಿನ ದಿನಗಳಲ್ಲಿ ಸಮಾಜದ ಆರೋಗ್ಯದ ಮೂಲಕ ದೊಡ್ಡ ಪ್ರತಿಫಲ ನೀಡಲಿದೆ. ಅಂದು ಸಹಾಯಹಸ್ತ – ಇಂದು ಕೊರೊನಾಮುಕ್ತ ಸಮಾಜ ನಮ್ಮ ಧ್ಯೇಯವಾಗಲಿ.
Related Articles
Advertisement
“ಲಸಿಕೆಯೇ ಶ್ರೀ ರಕ್ಷೆ’ ಅಭಿಯಾನಕ್ಕೆ ಓದುಗರಿಂದ ಉತ್ತಮ ಸ್ಪಂದನೆ ಮುಂದುವರಿದಿದ್ದು, ಹೊಸ ಹೊಸ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ| ರಾಜೇಶ್ ಅವರು ಉತ್ತರಿಸಿದ್ದಾರೆ.
ಲಸಿಕೆ ಪಡೆದ ಬಳಿಕ ಗರ್ಭಧಾರಣೆಗೆ ಸಮಸ್ಯೆ ಇದೆಯೇ? -ಶ್ಯಾಮಲಾ, ಊರು ಬೇಡ
ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದು ಮೂರು ತಿಂಗಳು ಗರ್ಭಧಾರಣೆ ಮಾಡುವಂತಿಲ್ಲ.
28 ವರ್ಷದ ನನ್ನ ತಂಗಿಗೆ ಅಲರ್ಜಿ ಸಮಸ್ಯೆಯಿದೆ. ಲಸಿಕೆ ಪಡೆಯಬಹುದೇ? -ಕವಿತಾ, ಮಂಗಳೂರು
ಅಲರ್ಜಿ ಸಮಸ್ಯೆ ಇರುವವರು ಲಸಿಕೆ ಪಡೆಯಬಹುದು. ಆದರೆ, ನಿಯಮಾವಳಿಯಂತೆ 28 ವರ್ಷದವರಿಗೆ ಸದ್ಯ ಲಸಿಕೆ ಪಡೆಯಲು ಅವಕಾಶ ಇಲ್ಲ. .
ಧೂಳಿನ ಅಲರ್ಜಿ ಇರುವವರು ಲಸಿಕೆ ತೆಗೆದು ಕೊಳ್ಳಬಹುದೇ? – ಶಕುಂತಳಾ, ಹೆರಾಡಿ
ಲಸಿಕೆ ಪಡೆಯಲು ಅರ್ಹತೆ ಇರುವರು ಅಲರ್ಜಿ ಇದ್ದರೂ ಲಸಿಕೆ ಪಡೆಯಬಹುದು. ಆದರೆ, ಧೂಳಿನ ಕೆಲಸದ ವೇಳೆ ಅಗತ್ಯವಾಗಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಿ.
ನನ್ನ ಗಂಡ ಪ್ರತೀ ದಿನ ಮದ್ಯ ಸೇವಿಸುತ್ತಾರೆ. ಲಸಿಕೆ ಪಡೆದ ಬಳಿಕ ಮದ್ಯ ಸೇವಿಸಬಹುದೇ?-ಅನಾಮಿಕ
ಲಸಿಕೆ ಪಡೆಯುವುದಕ್ಕೂ, ಮದ್ಯಪಾನ ಸೇವನೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ.
ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ವಯೋಮಾನದ ನಿರ್ಬಂಧ ಇದೆಯೇ? -ರಾಮಕೃಷ್ಣ, ಮೂಲ್ಕಿ
ಸದ್ಯ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯ ಕರ್ತರು, 45ರಿಂದ 60 ವರ್ಷದೊಳಗಿನ ರೋಗಿಗಳು ಮತ್ತು 60 ವರ್ಷ ಮೇಲ್ಪಟ್ಟವರು ಮಾತ್ರ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಪಡೆಯಬಹುದು..
ಜ್ವರ ಇದ್ದಾಗ ಲಸಿಕೆ ಪಡೆಯಬಹುದೇ?-ರಾಮ, ಕಾರ್ಕಳ
ಜ್ವರ ಇದ್ದಾಗ ಲಸಿಕೆ ಬೇಡ. ಆ ಜ್ವರ ಕೋವಿಡ್ ಆಗಿರಬಹುದು. ಜ್ವರದಿಂದ ಗುಣಮುಖರಾದ ಬಳಿಕ ಲಸಿಕೆ ಪಡೆಯುವುದು ಸೂಕ್ತ.
ಸಹಾಯವಾಣಿ ಉಡುಪಿ ಜಿಲ್ಲೆ -9663957222/9663950222
ಟೋಲ್‌ಫ್ರೀ ಸಹಾಯವಾಣಿ ಸಂಖ್ಯೆ-1077
ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ನಿಮಗೇನಾದರೂ ಸಂದೇಹ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್ ಮಾಡಿ.