Advertisement

ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?

01:11 AM Jan 16, 2021 | Team Udayavani |

ಯಾಕೆ ಕೋವಿಡ್ ಲಸಿಕೆ? :

Advertisement

ದೇಹದಲ್ಲಿ ರೋಗ ಪ್ರತಿ­ಕಾಯ­ಗಳನ್ನು ಹೆಚ್ಚಿಸುವ ಕಾರ ಣಕ್ಕೆ ಲಸಿಕೆ ನೀಡಲಾಗುತ್ತದೆ. ಇದು ಸೋಂಕಿತರ ಚಿಕಿತ್ಸೆಗಾಗಿ ನೀಡುವ ಔಷಧವಲ್ಲ.

ಯಾರಿಗೆ, ಎಷ್ಟು ಮಂದಿಗೆ ಲಸಿಕೆ? :

ಆರಂಭ ದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ. ಮೊದಲ ಲಸಿಕೆಯನ್ನು ಆಸ್ಪತ್ರೆಗಳ ಸ್ವತ್ಛತಾ/ ಡಿ ಗ್ರೂಪ್‌ ಸಿಬಂದಿಗೆ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿ 7.4 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಣಿ­ಯಾಗಿ­ದ್ದಾರೆ.

ಎಲ್ಲಿ ವಿತರಣೆ? :

Advertisement

ರಾಜ್ಯದ ಸರಕಾರಿ, ಖಾಸಗಿ ಆರೋಗ್ಯ ಕೇಂದ್ರ ಸೇರಿ ಒಟ್ಟು 242 ಕಡೆ ಶನಿವಾರ ಲಸಿಕೆ ವಿತರಿಸಲಾಗುತ್ತಿದೆ. ಅನಂತರ 2000ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕೆ ವಿತರಣೆ ಕಾರ್ಯನಡೆಯಲಿದೆ.

ಜನಸಾಮಾನ್ಯರಿಗೆ ಯಾವಾಗ? :

ಬಹುತೇಕ ಮಾರ್ಚ್‌ನಲ್ಲಿ ನಡೆಯುವ ಎರಡನೇ ಹಂತದ ಲಸಿಕಾ ವಿತರಣೆಯಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ದೀರ್ಘ‌­ಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ನೀಡಲಾಗುತ್ತದೆ.

ಲಸಿಕೆ ವಿತರಣೆಗೆ ಏನೆಲ್ಲ ಕ್ರಮ? :

ಕೇಂದ್ರದಲ್ಲಿ 7 ಹಂತಗಳಲ್ಲಿ ಲಸಿಕೆ ವಿತರಣೆ ಚಟುವಟಿಕೆ ನಡೆಯುತ್ತದೆ. ನೋಂದಣಿ, ಆಗಮಿಸಲು ಮೊಬೈಲ್‌ ಸಂದೇಶ, ದಾಖಲೆ ಪರಿಶೀಲನೆ, ವಿಶ್ರಾಂತಿ, ಚುಚ್ಚುಮದ್ದು ಹಾಗೂ ನಿಗಾ ಕೊಠಡಿಗಳು, ಲಸಿಕೆ ಯಶಸ್ವಿಯಾಗಿ ಹಾಕಿರುವ ಸಂದೇಶ.

ಲಸಿಕೆಗೆ ಪಡೆದವರಿಗೆ ಅಡ್ಡಪರಿಣಾಮ ಸಾಧ್ಯತೆ ಇದೆಯೇ? :

ಲಸಿಕೆ ಪಡೆದ 30 ನಿಮಿಷಗಳಲ್ಲಿಯೇ ಕೆಲವರಿಗೆ ಮಾತ್ರ ಜ್ವರ, ಮೈಕೈನೋವು, ತಲೆ ಸುತ್ತು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಗಾ ಕೊಠಡಿಯಲ್ಲಿ 30 ನಿಮಿಷ ಕೂರಿಸಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿರುತ್ತದೆ.

ಸೋಂಕಿತರಿಗೆ ಕೊಡಲಾಗುತ್ತದೆಯೇ? :

ಇಲ್ಲ, ಸೋಂಕಿನ ಲಕ್ಷಣ ಆಧರಿಸಿ ಇತರ ಔಷಧಗಳನ್ನು ಮಾತ್ರ ನೀಡಲಾಗುತ್ತದೆ. ಗುಣಮುಖರಾದ ಅನಂತರ ಭವಿಷ್ಯದಲ್ಲಿ ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯಬಹುದು.

ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೇ? :

ತಜ್ಞರ ಸೂಚನೆಯಂತೆ ಲಸಿಕೆ ಪಡೆದ ಮೇಲೂ ಮಾಸ್ಕ್ ಧರಿಸಬೇಕು. ಎಲ್ಲರಿಗೂ ಲಸಿಕೆ ಕೊಟ್ಟ ಅನಂತರ ಕಡ್ಡಾಯ ಮಾಸ್ಕ್ ನಿಯಮವನ್ನು ಕೈಬಿಡಲಾಗುತ್ತದೆ.

ಒಬ್ಬರಿಗೆ ಲಸಿಕೆ ಎಷ್ಟು ಬಾರಿ ನೀಡಲಾಗುತ್ತದೆ? ಯಾವಾಗ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ? :

ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್‌ ಪಡೆದ 28 ದಿನಗಳ ಬಳಿಕ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ. ಬೂಸ್ಟರ್‌ ಡೋಸ್‌ ತೆಗೆದುಕೊಂಡ ಎರಡು ವಾರಗಳ ಅನಂತರ ದೇಹದಲ್ಲಿ ಕೋವಿಡ್ ವೈರಸ್‌ ವಿರುದ್ಧ ಹೋರಾಡುವ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next