Advertisement

ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ: ಮೊದಲ ಹಂತದಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ

10:53 AM Jan 09, 2021 | Team Udayavani |

ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಡೆದ ಕೋವಿಡ್‌-19 ಲಸಿಕೆ ಡ್ರೈ ರನ್‌ಗೆ (ಅಣಕು ಕಾರ್ಯಕ್ರಮ) ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ವತಃ ತಾವೇ ಒಳಗಾದರು.

Advertisement

ಕೋವಿಡ್‌-19 ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವ ಸಂಬಂಧ ಡ್ರೈರನ್‌ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು. ವ್ಯವಸ್ಥೆಯನ್ನು ಪರಿಶೀಲಿಸಿದರು. ಅಣಕು ಕಾರ್ಯಕ್ರಮಕ್ಕೆ ತಾವೇ ಸ್ವತಃ ನೋಂದಾಯಿಸಿಕೊಂಡು ಪ್ರಕ್ರಿಯೆಗೆ ಒಳಗಾದರು.

ಸುರಕ್ಷಿತ ಪ್ರಕ್ರಿಯೆ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‌ ಲಸಿಕೆ ವಿತರಣೆಗೆ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ ಎಂದರು.

ಇದನ್ನೂ ಓದಿ:ಲಂಚಕ್ಕೆ ಬೇಡಿಕೆ: ಕಾನ್ಸ್ ಸ್ಟೇಬಲ್, ಆರ್‌.ಐ ಎಸಿಬಿ ವಶಕ್ಕೆ! ಇನ್ಸ್‌ಪೆಕ್ಟರ್‌ ಪರಾರಿ

ಸವಾಲಿನ ಕೆಲಸ: ಲಸಿಕೆ ನೀಡುವುದು ಸವಾಲಿನ ಕೆಲಸ. ಅದಕ್ಕೆ ನಾಲ್ಕು ಹಂತಗಳ ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕೆ ತಾಲೀಮು ಕೆಲಸ ಕೈಗೊಳ್ಳಲಾಗಿದೆ. ರಾಜ್ಯಾಂದ್ಯಂತ ಶುಕ್ರವಾರ ತಾಲೀಮು ನಡೆದಿದೆ. ರಾಮನಗರ ಜಿಲ್ಲೆ
ಒಂದರಲ್ಲೇ 8,405 ಕೋವಿಡ್‌ ಯೋಧರಿಗೆ ಕೋವಿನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತದ ನಂತರ ಪರಿಶೀಲನೆ, ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದವರನ್ನು ನಿಗಾದಲ್ಲಿ ಇರಿಸುವ ವ್ಯವಸ್ಥೆಯೂ ಆಗುತ್ತದೆ ಎಂದು
ಅವರು ವಿವರಿಸಿದರು.

Advertisement

ಮೊದಲ ಡೋಸ್‌ ಕೊಟ್ಟ ನಂತರ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುವುದು. ಇದು ಪ್ರಥಮ ಹಂತವಾಗಿರುತ್ತದೆ. ಎರಡನೇ ಹಂತದಲ್ಲಿ ಶೇ.8ರಿಂದ 10ರಷ್ಟು ಸಾರ್ವಜನಿಕರಿಗೆ, 3ನೇ ಹಂತದಲ್ಲಿ ಶೇ.20ರಷ್ಟು ಸಾರ್ವಜನಿಕರಿಗೆ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು.

ಜಿಲ್ಲೆಯಲ್ಲಿ 87 ಕೇಂದ್ರಗಳಲ್ಲಿ ಲಸಿಕೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 87 ಕೇಂದ್ರಗಳಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದ ಹೊತ್ತಿಗೆ ಈ ಕೇಂದ್ರಗಳ ಸಂಖ್ಯೆಯನ್ನು 395ಕ್ಕೆ ಹೆಚ್ಚಿಸಲಾಗುವುದು. ಲಸಿಕೆ ಸಾಗಾಣಿಕೆ, ಪೂರೈಕೆ ಜಾಲ, ಸಿಬ್ಬಂದಿ, ಕೋಲ್ಡ್‌ ಸ್ಟೋರೇಜ್‌ ಇತ್ಯಾದಿ ಸೇರಿ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಡೀಸಿಎಂ.ಎಸ್‌. ಅರ್ಚನಾ, ಡಾ.ನಿರಂಜನ, ಗಿರೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next