Advertisement

4 ದಿನ ಲಸಿಕೆ ಉತ್ಸವ : ಗರಿಷ್ಠ ಜನರು ಲಸಿಕೆ ಪಡೆಯಲು ಪ್ರೋತ್ಸಾಹ

01:38 AM Apr 11, 2021 | Team Udayavani |

ಹೊಸದಿಲ್ಲಿ: ಲಸಿಕೆ ಪಡೆಯಲು ಜನರಲ್ಲಿ ಇರುವ ಹಿಂಜರಿಕೆ ದೂರ ಮಾಡಿ, ಹೆಚ್ಚು ಮಂದಿ ಲಸಿಕೆ ಹಾಕಿಸಲು ಉತ್ತೇಜಿಸುವುದಕ್ಕಾಗಿ ಎ. 11ರಿಂದ 4 ದಿನ ದೇಶಾದ್ಯಂತ “ಲಸಿಕೆ ಉತ್ಸವ’ ನಡೆಯಲಿದೆ.

Advertisement

ಬಹುತೇಕ ರಾಜ್ಯಗಳು ಲಸಿಕೆ ಅಭಿಯಾನಕ್ಕೆ ಸಿದ್ಧತೆ ಮಾಡಿದ್ದು, ಬುಧವಾರದ ವರೆಗೆ ನಡೆಯಲಿದೆ.

ಇಂದು ಮಹಿಳೆಯರಿಗೆ ಆದ್ಯತೆ
ಎಪ್ರಿಲ್‌ 11 ಜ್ಯೋತಿಬಾ ಫ‌ುಲೆ ಅವರ ಜನ್ಮದಿನವಾಗಿದ್ದು, ಮಹಿಳೆಯ ರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡ ಲಾಗುತ್ತದೆ. ಎ. 14ರಂದು ಡಾ| ಅಂಬೇಡ್ಕರ್‌ ಜಯಂತಿಯಾಗಿದ್ದು, ಅಂದು ಯುವಜನತೆ, ಶೋಷಿತ ವರ್ಗಗಳು, ಕಾನೂನು ವಲಯದ ವೃತ್ತಿಪರರಿಗೆ ಪ್ರಾಶಸ್ತ್ಯ ನೀಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಸ್ಥಳದಲ್ಲೇ ನೋಂದಣಿ ಅವಕಾಶ
ಅರ್ಹರು ಕೋವಿನ್‌ ಪೋರ್ಟಲ್‌, ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಾಯಿಸಿ, ಲಸಿಕೆಗೆ ಅಪಾಯಿಂಟ್‌ಮೆಂಟ್‌ ಪಡೆಯಬಹುದು. ಸ್ಥಳದಲ್ಲೇ ನೋಂದಣಿಗೂ ವ್ಯವಸ್ಥೆ ಕಲ್ಪಿಸಲಾಗಿದೆ.

ಎಷ್ಟು ಸಾಧ್ಯವೋ ಅಷ್ಟು ಮಂದಿಗೆ ಲಸಿಕೆ ನೀಡುವುದು ಮತ್ತು ಲಸಿಕೆ ವ್ಯರ್ಥವಾಗುವುದನ್ನು ತಡೆಯುವುದೇ ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.

Advertisement

ರಾಜ್ಯದಲ್ಲಿ ಲಸಿಕೆ ಕೊರತೆ?
ರಾಜ್ಯದಲ್ಲಿ ಲಸಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ. ಇನ್ನೆರಡು ದಿನಗಳಿಗೆ ಸಾಕಾಗುವಷ್ಟು ಲಸಿಕೆ ಇದ್ದು, ಶೀಘ್ರ ದಾಸ್ತಾನು ರವಾನಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆರೋಗ್ಯ ಇಲಾಖೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next