ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ ಮೂರುಲಕ್ಷ ಜನರ ಕೋವ್ಯಾಕ್ಸಿನ್ ಎರಡನೇ ಡೋಸ್‌ಕಾಲಾವಧಿ ಮೀರಿದ್ದು, ಇಂದಿಗೂ ಲಸಿಕೆ ಸಿಗದೇಪರದಾಡುತ್ತಿದ್ದಾರೆ. ಇವರು ಕನಿಷ್ಠ ಇನ್ನೂ ಒಂದುವಾರ ಲಸಿಕೆಗೆ ಕಾಯಬೇಕಿದೆ. ಆನಂತರವೂಎಲ್ಲರಿಗೂ ಸಿಗುವುದು ಅನುಮಾನ.ಕೋವ್ಯಾಕ್ಸಿನ್‌ಲಸಿಕೆಮೊದಲ ಡೋಸ್‌ಪಡೆದುನಾಲ್ಕರಿಂದ ಆರು ವಾರದೊಳಗೆ (28 ರಿಂದ 42ದಿನ) ಎರಡನೇ ಡೋಸ್ ಪಡೆದುಕೊಳ್ಳಬೇಕು.
ಸದ್ಯ ರಾಜ್ಯದಲ್ಲಿ ಮೊದಲ ಡೋಸ್ ಪಡೆದು ಏಳುವಾರ ಪೂರ್ಣಗೊಂಡವರ ಸಂಖ್ಯೆ 2,95,795ಮಂದಿಇದೆ.ಈ ಪೈಕಿಒಂದುಲಕ್ಷಮಂದಿಯದ್ದು,ಎಂಟು ವಾರ ಪೂರ್ಣಗೊಂಡಿವೆ. ಆದರೆ,ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಕೊರತೆಯಿಂದಇಂದಿಗೂ ಎರಡನೇ ಡೋಸ್ ಸಿಕ್ಕಿಲ್ಲ. ರಾಜ್ಯದಎಲ್ಲಾ ಜಿಲ್ಲೆಗಳಲ್ಲಿಯೂ ಎರಡನೇ ಡೋಸ್‌ಕಾಲಾವಧಿ ಮೀರಿದವರಿದ್ದಾರೆ. ಪ್ರಮುಖವಾಗಿಮೂರು ಜಿಲ್ಲೆಗಳಲ್ಲಿ 20 ಸಾವಿರಕ್ಕೂ ಅಧಿಕ, 10ಜಿಲ್ಲೆಗಳಲ್ಲಿ10 ಸಾವಿರಕ್ಕೂ ಅಧಿಕ ಜನರಿದ್ದಾರೆ.ಎರಡನೇ ಡೋಸ್ ಕಾಲಾವಧಿಪೂರ್ಣಗೊಂಡಿದೆ,
ಶೀಘ್ರ ಲಸಿಕೆಹಾಕಿಸಿಕೊಳ್ಳಬೇಕು ಮತ್ತು ಕೊರೊನಾ ಎರಡನೇಅಲೆ ಆತಂಕದಿಂದ ನಿತ್ಯ ವಿವಿಧ ಸರ್ಕಾರಿಆಸ್ಪತ್ರೆಗಳಿಗೆ ಅಲೆದು, ಖಾಸಗಿ ಆಸ್ಪತ್ರೆಗಳಲ್ಲಿಯೂವಿಚಾರಿಸುತ್ತಿದ್ದಾರೆ. ಎಲ್ಲಾ ಕಡೆಯೂ ನೋ ಸ್ಟಾಕ್‌ಎಂಬ ಉತ್ತರವೇ ಸಿಗುತ್ತಿದೆ. ಇತ್ತ ಆರೋಗ್ಯಇಲಾಖೆ ಸದ್ಯ ದಾಸ್ತಾನು ಲಭ್ಯವಿಲ್ಲ ಎಂಬಕಾರಣಕ್ಕೆ ಕೋವ್ಯಾಕ್ಸಿನ್ ಎರಡನೇ ಡೋಸ್ ಬಾಕಿಇರುವವರಿಗೆ ಮೊಬೈಲ್ ಸಂದೇಶ ಬರುತ್ತದೆ, ಆಗಬನ್ನಿ ಎಂದು ಹೇಳಿದೆ.
ಆದರೆ, ಯಾವಾಗಮೊಬೈಲ್ ಸಂದೇಶ ಬರುತ್ತದೆ, ನೋಂದಣಿ ವೇಳೆಮೊಬೈಲ್ ನಂಬರ್ ಇಲ್ಲದವರು ಏನುಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ.ಹೀಗಾಗಿ, ಎರಡನೇ ಡೋಸ್ ಕಾಲಾವಧಿಮೀರಿದವರು ಆತಂಕದಲ್ಲಿದ್ದಾರೆ.ರಾಜ್ಯಕ್ಕೆ ಜೂನ್ ಮೊದಲ ವಾರ 1.6 ಲಕ್ಷಡೋಸ್: ರಾಜ್ಯಕ್ಕೆ ಜೂನ್ ಮೊದಲ ವಾರ 1.6ಲಕ್ಷ ಡೋಸ್ ಕೋವ್ಯಾಕ್ಸಿನ್ ಬರಲಿದೆ. ಆದರೂ,ಇನ್ನೂ ಅರ್ಧದಷ್ಟು ಮಂದಿಗೆಕೊರತೆಯಾಗಲಿದೆ.ಅಲ್ಲದೆ,
ಸದ್ಯ ಮೊದಲ ಡೋಸ್ ಕೋವ್ಯಾಕ್ಸಿನ್‌ಪಡೆದು ಐದು ವಾರ ಪೂರ್ಣಗೊಂಡವರ ಸಂಖ್ಯೆ4.55 ಲಕ್ಷವಿದ್ದು, ಜೂನ್ ಮೊದಲ ವಾರಕ್ಕೆಅವರದ್ದು, ಎರಡನೇ ಡೋಸ್ ಕಾಲಾವಧಿಪೂರ್ಣಗೊಳ್ಳಲಿದೆ.ಹೀಗಾಗಿ, ಕಾಲಾವಧಿ ಮೀರಿದವರಿಗೆ ದಿನಾಂಕದ ಆದ್ಯತೆ ಮೇರೆಗೆ ನೀಡಲು ನಿರ್ಧರಿಸಲಾಗಿದೆ.ಅಂದರೆ, ಯಾರು ಮುಂಚೆ ಮೊದಲ ಡೋಸ್‌ಪಡೆದಿರುತ್ತಾರೋ ಅವರಿಗೆ ಎರಡಲ್ಲಿ ಆದ್ಯತೆನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಅಧಿಕಾರಿಗಳು ತಿಳಿಸಿದ್ದಾರೆ.
ಜಯಪ್ರಕಾಶ್ ಬಿರಾದಾರ್