Advertisement
ಇದಕ್ಕಾಗಿ ಎಲ್ಲರೀತಿಯ ಸಿದ್ಧತೆಗಳನ್ನು ಈಗಾಗಲೇಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿಅವರು ತಿಳಿಸಿದ್ದಾರೆ.ಲಸಿಕಾಕರಣ ಕಡಿಮೆಪ್ರಮಾಣವಾಗಿರುವ ಹಿನ್ನೆಲೆಯಲ್ಲಿಈ ವಿಶೇಷ ಲಸಿಕಾ ಆಂದೋಲನವನ್ನು ಬಳ್ಳಾರಿಗ್ರಾಮೀಣ, ಸಿರಗುಪ್ಪ ಮತ್ತು ಕುರುಗೋಡುತಾಲೂಕುಗಳಾದ್ಯಂತ ಹಮ್ಮಿಕೊಳ್ಳಲಾಗಿದೆ.ಇದಕ್ಕಾಗಿ 410 ತಂಡಗಳನ್ನು ರಚಿಸಲಾಗಿದ್ದು,ಈ ತಂಡಗಳು ಬುಧವಾರ (ಸೆ. 22ರಂದು)ಬೆಳಗ್ಗೆ 7ರಿಂದ ಸಂಜೆಯವರೆಗೆ ವಿವಿಧೆಡೆಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಿವೆ ಎಂದು ಅವರು ತಿಳಿಸಿದ್ದಾರೆ.
Related Articles
Advertisement
ಎಲ್ಲ ತಾಲೂಕುಗಳಲ್ಲಿ ಕಂದಾಯಇಲಾಖೆ, ನಗರ ಸ್ಥಳೀಯ ಸಂಸ್ಥೆ,ತಾಪಂ, ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್ ಇಲಾಖೆ, ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಅ ಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆವಿವಿಧ ಇಲಾಖೆಗಳ ಅಧಿಕಾರಿಗಳುಮತ್ತು ಸಿಬ್ಬಂದಿ ಈ ಬೃಹತ್ ವಿಶೇಷ ಲಸಿಕಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನರುಸಹ ಮುಂದೆ ಬಂದು ಲಸಿಕೆ ಪಡೆದುಕೊಂಡುಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಜನರು,ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳಸದಸ್ಯರು, ತಾಪಂ ಮತ್ತು ಜಿಪಂ ಸದಸ್ಯರು,ಶಾಸಕರು, ಸಂಸದರು ಸೇರಿದಂತೆ ಎಲ್ಲಜನಪ್ರತಿನಿ ಧಿಗಳು ಮುಂದೆ ಬಂದು ಈ ಲಸಿಕಾಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದಭಾಗವಹಿಸಬೇಕು ಎಂದು ಮನವಿ ಮಾಡಿದರು.ತಾವು ಲಸಿಕೆ ಹಾಕಿಸಿಕೊಂಡಿರುತ್ತೀರಿ. ತಾವುಹಾಕಿಕೊಂಡರಾಯ್ತು ಅಂತ ಅಂದುಕೊಳ್ಳದೇ ತಮ್ಮಅಕ್ಕಪಕ್ಕದ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳದವರಮನವೊಲಿಸಿ ಅವರನ್ನು ಲಸಿಕಾಕೇಂದ್ರಗಳಿಗೆ ಕರೆ ತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಉಳಿದೆಡೆ ಎಂದಿನಂತೆ ಲಸಿಕಾ ನೀಡಿಕೆ ಪ್ರಕ್ರಿಯೆನಡೆಯಲಿವೆ ಎಂದು ಅವರು ತಿಳಿಸಿದರು. ಈಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್. ನಂದಿನಿ,ಅಪರ ಜಿಲ್ಲಾ ಧಿಕಾರಿ ಪಿ.ಎಸ್.ಮಂಜುನಾಥ, ಎಸಿಆಕಾಶ ಶಂಕರ್, ಡಿಎಚ್‌ಒ ಡಾ| ಜನಾರ್ಧನ್‌ಮತ್ತಿತರರು ಇದ್ದರು.