Advertisement

ರಾಜ್ಯಕ್ಕೆ ಸಿಗಬೇಕಾದ ಲಸಿಕೆ ಸಿಕ್ಕೆ  ಸಿಗುತ್ತೆ: ನಿರ್ಮಲಾ

05:56 PM Jul 02, 2021 | Team Udayavani |

ಬೆಂಗಳೂರು: ರಾಜ್ಯಕ್ಕೆ  ಬರಬೇಕಾದ ಲಸಿಕೆಯಲ್ಲಿಯಾವುದೇ ಕೊರತೆ ಆಗುವುದಿಲ್ಲ ಮತ್ತು ಕಳೆದವರ್ಷದಷ್ಟೇ ಜಿಎಸ್‌ಟಿ ಪರಿಹಾರ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಜಯನಗರದ ಸರ್ಕಾರಿ ಆಸ್ಪತ್ರೆ ಹಾಗೂ ಯಲಹಂಕದ ಕೋವಿಡ್‌ ವಿಶೇಷ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಸಿಗಬೇಕಾದ ಲಸಿಕೆ ಸಿಕ್ಕೇ ಸಿಗುತ್ತದೆ. ಎಲ್ಲರಾಜ್ಯಗಳಿಗೂ ಅಗತ್ಯಕ್ಕೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಎಷ್ಟು ಪೂರೈಕೆಮಾಡುತ್ತದೆಯೋ ಅದರ ಬಗ್ಗೆ ವಾರದ ಮೊದಲೇ ಮಾಹಿತಿ ನೀಡುತ್ತದೆ. ರಾಜ್ಯಗಳಲ್ಲಿ ಲಸಿಕೆ ಬಳಕೆಮಾಡಿದಂತೆಲ್ಲ ಸಕಾಲಕ್ಕೆ ಪೂರೈಕೆ ಆಗುತ್ತಿರುತ್ತದೆ.ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಲಸಿಕೆ ಪೂರೈಕೆನಿರ್ವಹಣೆ ಮಾಡುತ್ತಿದೆ ಎಂದರು.

ರಾಜ್ಯಕ್ಕೆ ಬಾಕಿ ಇರುವ ಜಿಎಸ್‌ಟಿ ಪರಿಹಾರ ಒದಗಿಸುವ ಬಗ್ಗೆಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದಷ್ಟೇ ಈ ವರ್ಷವೂಜಿಎಸ್‌ಟಿ ಪರಿಹಾರ ಸಿಗಲಿದೆ. ಎಷ್ಟು ಪ್ರಮಾಣ ಎಂದು ಸದ್ಯಹೇಳಲು ಸಾಧ್ಯವಿಲ್ಲ. ಕೇಂದ್ರವು ಸಾಲ ಪಡೆದು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುತ್ತಿದೆ.ಈ ಪ್ರಕ್ರಿಯೆಪ್ರಸಕ್ತ ಸಾಲಿನಲ್ಲೂ ಮುಂದುವರಿಯಲಿದೆ.

ಜಿಎಸ್‌ಟಿ ಜಾರಿಯಾಗಿ ನಾಲ್ಕುವರ್ಷವಾಗಿದೆ. ಮುಂಬರುವ ಸಂಸತ್‌ ಅಧಿವೇಶನದಲ್ಲಿಜಿಎಸ್‌ಟಿ ಪರಿಹಾರಕುರಿತು ವಿಶೇಷಕಲಾಪ ಇರಲಿದೆ. ವಿಶೇಷಕಲಾಪದಲ್ಲಿ ರಾಜ್ಯಗಳ ಜಿಎಸ್‌ಟಿ ಪರಿಹಾರದ ಬಗ್ಗೆಯೇ ಚರ್ಚೆನಡೆಸಲಾಗುತ್ತದೆ ಎಂದು ಹೇಳಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಸಂಸದ ತೇಜಸ್ವಿ ಸೂರ್ಯಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next