Advertisement

ಮೈಸೂರು: ಇಂದು 45 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ

09:34 PM Jun 21, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ ಇಂದಿನಿಂದ18ರಿಂದ 44 ವರ್ಷ ವಯೋಮಾನದವರಿಗೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದ್ದು,ಜಿಲ್ಲೆಯಾದ್ಯಂತ 177 ಕೇಂದ್ರಗಳಲ್ಲಿ ಪ್ರತಿದಿನ 25 ಸಾವಿರ ಮಂದಿಗೆ ಲಸಿಕೆಹಾಕಲು ಸಿದ್ಧತೆ ನಡೆಸಲಾಗಿದೆ.

Advertisement

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿದೇಶದಾದ್ಯಂತ ಬಹು ಬೇಡಿಕೆಯ 18ರಿಂದ 44ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆಯಲಿದ್ದು,ಉಚಿತ ಲಸಿಕೆ ಅಭಿಯಾನಕ್ಕೆ ಜಿಲ್ಲಾಡಳಿತ, ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿಯಾನದಆರಂಭದ ಮೊದಲ ದಿನ 45 ಸಾವಿರ ಜನರಿಗೆ ಲಸಿಕೆ ಹಾಕಲು ಸಿದ್ಧತೆಮಾಡಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 25 ಸಾವಿರ ಮಂದಿ ಹಾಗೂ ಪಾಲಿಕೆಯಿಂದ 20 ಸಾವಿರಮಂದಿಗೆ ಲಸಿಕೆ ಹಾಕಿ, ಜಿಲ್ಲೆಯಲ್ಲಿ ಎಲ್ಲರಿಗೂ ತ್ವರಿತಗತಿಯಲ್ಲಿ ಲಸಿಕೆಹಾಕಿಸುವ ಗುರಿ ಸಾಧಿಸಲು ಮುಂದಾಗಿದೆ.

ನಗರ ಸೇರಿದಂತೆ ಜಿಲ್ಲೆಯ 177 ಕೇಂದ್ರಗಳಲ್ಲಿ 15,95,881 ಲಕ್ಷಮಂದಿಗೆ ಉಚಿತವಾಗಿ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದ್ದು, ನಿತ್ಯ 22ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.ಮೈಸೂರು ನಗರದ 28 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆಜಿಲ್ಲೆಯಲ್ಲಿರುವ 166 ಪ್ರಾಥಮಿಕ ಆರೋಗ್ಯಕೇಂದ್ರ, 9 ಸಮುದಾಯ ಆರೋಗ್ಯ ಕೇಂದ್ರ, 6ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾ ಕೇರ್‌ಸೆಂಟರ್‌, ಪಂಚಕರ್ಮ ಆಸ್ಪತ್ರೆ ಸೇರಿದಂತೆ 177ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.

ಒಂದೊಂದು ಕೇಂದ್ರದಲ್ಲೂ ಕನಿಷ್ಠ 150ರಿಂದ 500ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.ಸರ್ಕಾರ ಜಿಲ್ಲಾಡಳಿತಕ್ಕೆ ದಿನವೊಂದಕ್ಕೆ 25 ಸಾವಿರ ಮಂದಿಗೆ ಲಸಿಕೆಹಾಕುವಂತೆ ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಹಾಗೂಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಸಿಕಾ ಅಭಿಯಾನಕ್ಕೆಸಿದ್ಧತೆ ಮಾಡಿಕೊಂಡಿದೆ. ಪಾಲಿಕೆ ವತಿಯಿಂದ ಪ್ರಂಟ್‌ಲೆçನ್‌ ವರ್ಕರ್ಹಾಗೂ ಕುಟುಂಬದ ಸದಸ್ಯರಿಗಾಗಿ ವಿಶೇಷ ಅಭಿಯಾನದ ಮೂಲಕ20 ಸಾವಿರ ಮಂದಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next