Advertisement
ಒಂದೆಡೆ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿಯೇ ಸರ್ಕಾರಿ ಕೋಟಾದಡಿ ಹಾಸಿಗೆ ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಬಹುತೇಕ ರೋಗಿಗಳು ಆಯುಷ್ಮಾನ್‌ಕಾರ್ಡ್ ಬಳಸಿ ನೇರವಾಗಿ ಖಾಸಗಿ ಆಸ್ಪತ್ರೆಯತ್ತ ವಾಲುತ್ತಿದ್ದಾರೆ. ಇದರಿಂದ ಸೋಂಕಿತರು ಮತ್ತು ಇತರೆ ರೋಗಿಗಳು ಈ ಎರಡೂ ವರ್ಗಗಳ ಚಿಕಿತ್ಸಾ ವೆಚ್ಚವನ್ನು ಆರ್ಥಿಕ ಸಂಕಷ್ಟದ ನಡುವೆಯೂ ಭರಿಸುವ ಅನಿವಾರ್ಯತೆ ಎದುರಾಗಿದೆ.
Related Articles
Advertisement
ಅನೇಕ ಖಾಸಗಿ ಆಸ್ಪತ್ರೆಗಳು ಸಂಕಷ್ಟದಲ್ಲಿವೆ’ ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ಹೇಳುತ್ತಾರೆ. “ನಿತ್ಯ ಸೋಂಕಿತರು ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಏರಿಕೆಯಾಗುತ್ತಿದೆ. ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 15 ದಿನಗಳಲ್ಲೇ ವೆಚ್ಚ ಪಾವತಿಸಲಾಗುತ್ತಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾಟ್ರಸ್ಟ್‌ಅಧಿಕಾರಿಯೊಬ್ಬರು”ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಖಾಸಗಿಯಾದ್ರೆ ಮಾತ್ರ ದಾಖಲಾಗ್ತೀವಿ!: “ಖಾಸಗಿ ಆಸ್ಪತ್ರೆಯಾದರೆ ಮಾತ್ರ ದಾಖಲಾಗುತ್ತೇನೆ ಇಲ್ಲವಾದರೆ ಮನೆಯಲ್ಲಿಯೇಚಿಕಿತ್ಸೆಪಡೆಯುತ್ತೇನೆ’ – ಇದು ವಾರ್ ರೂಂನಿಂದಕರೆ ಮಾಡಿ, ಆಸ್ಪತ್ರೆ ಹಾಸಿಗೆ ನಿಗದಿಪಡಿಸುವ ಸಂದರ್ಭದಲ್ಲಿ ಬಹುತೇಕ ಸೋಂಕಿತರ ಉದ್ಗಾರ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಎಷ್ಟು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದರೂ ಖಾಸಗಿ ಆಸ್ಪತ್ರೆ ಹಾಸಿಗೆಯನ್ನೇ ನೀಡಬೇಕುಎಂದುಒತ್ತಾಯಿಸುತ್ತಾರೆ. ಅಂತಿಮವಾಗಿ ಖಾಸಗಿಯಾದರೆ ಮಾತ್ರ ದಾಖಲಾಗು ತ್ತೇನೆ’ ಎಂದುಹೇಳುತ್ತಾರೆ. ಇನ್ನುಕೆಲವರು ಸರ್ಕಾರದಹಿರಿಯಅಧಿಕಾರಿಗಳು,ಸ್ಥಳೀಯರಾಜಕಾರಣಿಗಳಿಂದ ಶಿಫಾರಸು ಮಾಡುತ್ತಾರೆ ಎಂದು ವಾರ್ ರೂಂ ಸಿಬ್ಬಂದಿ ಹೇಳುತ್ತಾರೆ.
ಇತರರಿಗೆ ಸೋಂಕಿನ ಭೀತಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಹಿನ್ನೆಲೆ ಬಹುತೇಕ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳು ನಡೆಸುತ್ತಿಲ್ಲ. ಜತೆಗೆ ಸಿಬ್ಬಂದಿ ಕೊರತೆ ನೆಪ ಹೇಳುತ್ತಿವೆ. ಇದಲ್ಲದೆ ರೋಗಿಗಳೂ ಸರ್ಕಾರಿ ಆಸ್ಪತ್ರೆಗೆ ತೆರಳಲು ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಈ ಮೊದಲೇ ಇರುವ ತಪ್ಪುಕಲ್ಪನೆ ಹಾಗೂ ಈಗಾಗಲೇ ವಿವಿಧ ರೀತಿಯ ಕಾಯಿಲೆಗಳಿಂದ ಬಳಲು ತ್ತಿದ್ದು, ಸೋಂಕು ತಗುಲುವ ಭೀತಿಅವರನ್ನು ಕಾಡುತ್ತಿದೆ. ಇದರಿಂದಾಗಿ ನೇರವಾಗಿ ಆರೋಗ್ಯ ಕಾರ್ಡ್ ಬಳಸಿ ಖಾಸಗಿ ಆಸ್ಪತ್ರೆ ಕಡೆ ಮುಖಮಾಡುತ್ತಿದ್ದಾರೆ.
ಸೋಂಕು ದೃಢಪಡುವ ಪ್ರಮಾಣ ತುಸು ಇಳಿಕೆ :
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಒಟ್ಟಾರೆ ಕೋವಿಡ್ ಸೋಂಕು ದೃಢಪಡುವ ಪ್ರಕರಣ ಪ್ರಮಾಣ ಕಡಿಮೆಯಾಗಿವೆಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದರು.
ನಗರದಲ್ಲಿ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪ್ರತಿ ಕ್ರಿಯಿಸಿದ ಅವರು, ನಗರದಲ್ಲಿ ಪ್ರತಿ ದಿನ ದಾಖ ಲಾಗುವ ಪಾಸಿಟಿವ್ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ 10 ಪಟ್ಟು ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ನಿತ್ಯ 40 ಸಾವಿರಕ್ಕೂ ಹೆಚ್ಚು ಸೋಂಕು ಪರೀಕ್ಷೆ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 82.70 ಲಕ್ಷ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳ ಆಧಾರದ ಮೇಲೆ ಶೇ.13 ಪಾಸಿಟಿವ್ ಪ್ರಮಾಣ ಇರುವುದು ಪತ್ತೆಯಾಗಿದೆ. ಒಂದು ವಾರದಲ್ಲಿ ಪಾಲಿಕೆ ವ್ಯಾಪ್ತಿಯ ಎಂಟು ವಲ ಯಗಳಲ್ಲಿ ಶೇಕಡಾವಾರು ಸೋಂಕು ದೃಢಪಡುವ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿವೆ. ಸೋಂಕಿತರ ಸಾವಿನ ಪ್ರಮಾಣ ಶೇ.1.17ರಷ್ಟಿದೆ ಎಂದು ಮಾಹಿತಿ ನೀಡಿದರು.
3,021 ಸೋಂಕು ಮುಕ್ತರ ಬಿಡುಗಡೆ :
ಬೆಂಗಳೂರು: ನಗರದಲ್ಲಿ ಶುಕ್ರವಾರ3,021 ಮಂದಿ ಕೋವಿಡ್ ಸೋಂಕಿನಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು ಬಿಡುಗಡೆ ಸಂಖ್ಯೆ2,31,483ಕ್ಕೆ ಏರಿಕೆ ಆಗಿದೆ. ಶುಕ್ರವಾರ ಒಟ್ಟು 24 ಮಂದಿ ಸಾವಿಗೀಡಾಗಿದ್ದು, ಒಟ್ಟು ಮೃತರ ಸಂಖ್ಯೆ 3,486 ಕ್ಕೆ ಏರಿಕೆಯಾಗಿದೆ.
3,788 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆ ಹಾಗೂ ಜತೆಗೆ 3,441 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,00,634 ಕ್ಕೆ ಏರಿದೆ. ಹಾಗೆಯೇ ನಗರದಲ್ಲಿ ಪ್ರಸ್ತುತ 65,664 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲಾ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. ಅಲ್ಲದೆ 359 ಮಂದಿ ತೀವ್ರ ನಿಗಾಘಟಕದಲ್ಲಿದ್ದಾರೆ.
– ಜಯಪ್ರಕಾಶ್ ಬಿರಾದಾರ್