ಗುಂಡ್ಲುಪೇಟೆ: ಕೊರೊನಾ 2 ಅಲೆ ತಾಲೂಕಿನ ಪ್ರತಿಹಳ್ಳಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಖಾತ್ರಿ ಕಾಮಗಾರಿಗಳನ್ನು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.ತಾಲೂಕಿನ ಹೋಬಳಿ ಕೇಂದ್ರವಾದ ಹಂಗಳದಲ್ಲಿನರೇಗಾ ಕಾಮಗಾರಿಗೆ ನಿತ್ಯ 500 ಕೂಲಿ ಕಾರ್ಮಿಕರುಬರುತ್ತಿದ್ದರು.
ಇವರು ಕೆಲಸ ಮಾಡುವ ವೇಳೆಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಪಾಲಿಸದೇಅಕ್ಕಪಕ್ಕ ನಿಂತು ಕೆಲಸ ನಿರ್ವಹಿಸುತ್ತಿದ್ದರು. ಇದರಲ್ಲಿಒಬ್ಬ ವ್ಯಕ್ತಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆಯಲ್ಲಿಸೋಂಕು ಎಲ್ಲರಿಗೂ ಹರಡುವುದನ್ನು ತಡೆಗಟ್ಟಲುಗ್ರಾಪಂ ವತಿಯಿಂದ ಕಾಮಗಾರಿ ನಿಲುಗಡೆಮಾಡಲಾಗಿದೆ.
ಜನಸಂಖ್ಯೆ ಕಡಿಮೆ ಇರುವೆಡೆ ಕೆಲಸ: ನರೇಗಾಕೆಲಸಕ್ಕೆ ಕಡಿಮೆ ಕಾರ್ಮಿಕರು ಬರುವ ಗ್ರಾಮಗಳಲ್ಲಿಕಾಮಗಾರಿ ಮುಂದುವರಿಸಲಾಗಿದೆ. ಇವರುಮಾಸ್ಕ್ ಧರಿಸಿ, ಅಂತರ ಕಾಯ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲ ಗ್ರಾಪಂಗಳಲ್ಲಿ ನರೇಗಾ ಎಂಜಿನಿಯರ್‌ಮತ್ತು ಪಿಡಿಒಗಳು ಕೆರೆ ಕೆಲಸಕ್ಕೆ ಬರುವವರಿಗೆಒಂದು ಗುಂಡಿಗೆ 10 ಅಡಿ ಅಂತರ ನೀಡಿ ಕೆಲಸಮಾಡುವಂತೆ ಸೂಚಿಸಿದ್ದಾರೆ.
ವೈಯಕ್ತಿಕ ಕೆಲಸಕ್ಕೆ ಆದ್ಯತೆ: ಗ್ರಾಮಗಳಲ್ಲಿ ಜನರುಸಾಮೂಹಿಕ ನಿರ್ವಹಿಸುವ ಕಾಮಗಾರಿಗಳಾದ ಕೆರೆಹೂಳೆತ್ತುವುದು, ಕಾಲುವೆ ನಿರ್ಮಾಣ ಸೇರಿದಂತೆಇನ್ನಿತರ ಕೆಲಸಕ್ಕೆ ಕಡಿವಾಣ ಹಾಕಲಾಗಿದ್ದು, ವೈಯಕ್ತಿಕವಾಗಿ ಇಂಗು ಗುಂಡಿ, ಬಚ್ಚಲು ಗುಂಡಿನಿರ್ಮಾಣದಂತಹ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ.
ಕೂತನೂರಿನಲ್ಲಿ ಸ್ಥಗಿತ: ಕೂತನೂರಿನಲ್ಲಿ ಸುಮಾರು30 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಹಿನ್ನೆಲೆ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ನರೇಗಾಕೆಲಸವನ್ನು ವಾರದ ಹಿಂದೆಯೇ ಸ್ಥಗಿತಗೊಳಿಸಿದ್ದಾರೆ.
ಮೈಕ್ ಮೂಲಕ ಜಾಗೃತಿ: ಕೆಲ ಗ್ರಾಮ ಪಂಚಾಯಿತಿಯವರು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ತಪ್ಪಿದ್ದಲ್ಲಿ 100 ದಂಡ, ಒಂದೇ ಕಡೆ ಹೆಚ್ಚು ಜನಸೇರಬಾರದು ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಹಂಗಳ ಹೋಬಳಿ ದೊಡ್ಡ ಗ್ರಾಮವಾಗಿರುವ ಹಿನ್ನೆಲೆ ಪ್ರತಿದಿನ ನರೇಗಾಕೆಲಸಕ್ಕೆ ಸುಮಾರು 500 ಮಂದಿ ಬರುತ್ತಿದ್ದರು. ಪ್ರಸ್ತುತ ಸೋಂಕಿತರು ಹೆಚ್ಚುತ್ತಿರುವಪರಿಣಾಮ ಹಾಗೂ ಸಾರ್ವಜನಿಕರಆರೋಗ್ಯದ ಹಿತ ದೃಷ್ಟಿಯಿಂದ ನರೇಗಾಕಾಮಗಾರಿ ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿದೆ.
ಬಸವರಾಜು ಎಸ್.ಹಂಗಳ