Advertisement
ರಾಜ್ಯ ಸರಕಾರದ ಸೂಚನೆಯಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಶುಕ್ರವಾರದಿಂದ ಜಿಲ್ಲೆಯಲ್ಲಿ 9 ರಿಂದ 12ನೇ ತರಗತಿ ವರೆಗೆ ಎಲ್ಲಶಾಲಾ-ಕಾಲೇಜುಗಳು ಪ್ರಾರಂಭಗೊಂಡಿವೆ. ಜ.1ರಿಂದ ಎಲ್ಲ ಶಾಲೆ, ಕಾಲೇಜುಗಳು ಕಾರ್ಯಾರಂಭಿಸಿದ್ದು,ಮಕ್ಕಳು ಕೂಡಾ ಸಂಭ್ರಮದಿಂದ ಹಾಜರಾಗುತ್ತಿದ್ದಾರೆ.ಈ ನಡುವೆ ಕೆಲ ಖಾಸಗಿ ಶಾಲೆಗಳ ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಂಡು ಬಂದಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಈ ಪೈಕಿ ಬಹುತೇಕ ಶಿಕ್ಷಕಿಯರು ವಿವಿಧ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ನರ್ಸ್(ದಾದಿಯರು) ಗಳಾಗಿದ್ದಾರೆ. ಇತ್ತೀಚೆಗೆ ನಡೆದ ಹಬ್ಬದ ಸಂಭ್ರಮದಲ್ಲಿಸಾಕಷ್ಟು ಜನರೊಂದಿಗೆ ಬೆರೆತಿರುವುದು, ಗೋವಾ,ಮಂಗಳೂರು ಪ್ರಯಾಣದಿಂದಾಗಿ ಸೋಂಕು ಹರಡಿರುವ ಸಾಧ್ಯತೆಗಳಿವೆ. ಅಲ್ಲದೇ, ಕೆಲ ಶಿಕ್ಷಕರಿಗೆಸೋಂಕು ಖಚಿತವಾಗಿರುವ ಸುದ್ದಿ ಹರಡುತ್ತಿದ್ದಂತೆಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕ್ಷೀಣಿಸಿತ್ತು ಎನ್ನಲಾಗಿದೆ.
ಪ.ಪೂ.ಉಪನ್ಯಾಸಕರಿಗಿಲ್ಲ ಕೋವಿಡ್ ಪರೀಕ್ಷೆ:ಕಳೆದ ತಿಂಗಳು ಆರಂಭಗೊಂಡ ಪದವಿ ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿತ್ತು.ಇದೀಗ ಪುನಾರಂಭಗೊಂಡಿರುವ ವಿದ್ಯಾಗಮಕ್ಕೆ ಶಿಕ್ಷಕರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ಸರಕಾರ, ಈ ನಿಯಮದಿಂದ ಪ.ಪೂ. ಕಾಲೇಜು ಉಪನ್ಯಾಸಕರನ್ನು ಹೊರಗಿಟ್ಟಿರುವುದು ಕುತೂಹಲ ಮೂಡಿಸಿದೆ.
ಜಿಲ್ಲೆಯಲ್ಲಿ 27 ಸರಕಾರಿ, 27 ಅನುದಾನಿ ಹಾಗೂ 35 ಕ್ಕೂ ಹೆಚ್ಚು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ 500ಕ್ಕೂ ಹೆಚ್ಚು ಉಪನ್ಯಾಸಕರು ಬೋಧಿಸುತ್ತಿದ್ದು, ಅವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ. ಆದರೆ, ಕಾಲೇಜಿಗೆ ಹಾಜರಾಗುವವಿದ್ಯಾರ್ಥಿಗಳು ಮಾತ್ರ ಪೋಷಕರ ಒಪ್ಪಿಗೆ ಪತ್ರ ಸಲ್ಲಿಕೆಕಡ್ಡಾಯಗೊಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಹೀಗಾಗಿ, ಕಳೆದ ಎರಡು ದಿನಗಳಿಂದ ಶೇ.38 ರಷ್ಟು ಮಾತ್ರ ವಿದ್ಯಾರ್ಥಿಗಳ ಹಾಜರಾತಿ ದಾಖಲಾಗಿದೆ. ಅಲ್ಲದೇ,ಪದವಿ ಪೂರ್ವ ಹಂತದಲ್ಲೂ ಎಲ್ಲ ಉಪನ್ಯಾಸಕರುಹಾಗೂ ವಿದ್ಯಾರ್ಥಿಗಳಿಗೂ ಮುಂಜಾಗ್ರತಾ ಕ್ರಮವಾಗಿಕೋವಿಡ್ ಪರೀಕ್ಷೆ ನಡೆಸುವುದು ಸೂಕ್ತ ಎಂಬುದು ಪೋಷಕರ ಅಭಿಪ್ರಾಯ.
ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 11 ಶಿಕ್ಷಕರಿಗೆ ಕೋವಿಡ್ ಸೋಂಕು ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಯಾ ಶಾಲೆಗಳಿಗೆ 7 ದಿನ ರಜೆ ನೀಡಿದ್ದೇವೆ. ಈ ಹಂತದಲ್ಲಿ ಯಾವುದೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ. ಆದರೂ, ಅವರೊಂದಿಗೆ ಪ್ರಾಥಮ ಸಂಪರ್ಕಿತರನ್ನು ಗುರುತಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. – ಜಿ.ಎಂ.ಬಸವಲಿಂಗಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಆದರೂ, ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಪಡುವಂತೆ ಉಪನ್ಯಾಸಕರಿಗೆ ಮೌಖೀಕ ನಿರ್ದೇಶನ ನೀಡಿದ್ದೇವೆ. ಈ ವರೆಗೆ ಜಿಲ್ಲೆಯ ಉಪನ್ಯಾಸಕರಿಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ಮಾಹಿತಿ ಬಂದಿಲ್ಲ. – ಸಿ.ಜಯಪ್ಪ, ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ
-ವೀರೇಂದ್ರ ನಾಗಲದಿನ್ನಿ