Advertisement

ಗೋಕಾಕದ ಇಂಜಿನಿಯರ್‌ಗೆ ಕೋವಿಡ್

12:59 PM Jul 13, 2020 | Suhan S |

ಗೋಕಾಕ: ಬೆಂಗಳೂರಿನಲ್ಲಿ ಇಂಜನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿಯ ಬಸವ ನಗರದ ನಿವಾಸಿ, 27 ವರ್ಷದ ಯುವಕನಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಜಗದೀಶ ಜಿಂಗಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆತನೊಂದಿಗೆ ವಾಸವಾಗಿದ್ದ ಪೊಲೀಸ್‌ ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂಜಿನಿಯರ್‌ ಅವರ ಗಂಟಲ ದ್ರವವನ್ನು ಪರೀಕ್ಷೆ ಒಳಪಡಿಸಿ, ವರದಿ ಬರುವವರೆಗೂ ಹೋಮ್‌ ಕ್ವಾರಂಟೈನ್‌ ನಲ್ಲಿ ಇರಲು ಸೂಚಿಸಲಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆ ಯುವಕನು ರಾತ್ರೋರಾತ್ರಿ ಬೆಂಗಳೂರಿನಿಂದ ಗೋಕಾಕ ನಗರಕ್ಕೆ ಆಗಮಿಸಿ ವಿಕೋಪ ನಿರ್ವಹಣಾ ಕಾಯ್ದೆ-2005 ಉಲ್ಲಂಘನೆ ಮಾಡಿದ್ದಾನೆ ಎಂದು ಡಾ. ಜಿಂಗಿ ಅವರು ಮಾಹಿತಿ ನೀಡಿದರು.

ಈ ಪ್ರಕರಣದ ಕುರಿತು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಪ್ರತಿಕ್ರಿಯಿಸಿ ವಿಕೋಪ ನಿರ್ವಹಣಾ ಕಾಯ್ದೆ-2005ರ ಉಲ್ಲಂಘಿಸಿ ನಗರಕ್ಕೆ ಆಗಮಿಸಿರುವ ಸೋಂಕಿತ ಇಂಜಿನಿಯರ್‌ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೇ ಮನೆಯ ಸುತ್ತಮುತ್ತ 50 ಮೀಟರ್‌ ಸಿಲ್‌ಡೌನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next