Advertisement
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಜೆನೆಟಿಸ್ಟ್, ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮೂರನೇ ಅಲೆಯು ಕೋವಿಡ್ ನಿಂದ ಗುಣಮುಖರಾದವರು, ಲಸಿಕೆ ಪಡೆದವರು ಮತ್ತು ಮಕ್ಕಳಿಗೆ ಕಡಿಮೆ ಅಪಾಯಕಾರಿ ಎಂದಿದ್ದಾರೆ.
Related Articles
Advertisement
“ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿಕಾಯಗಳ (ಆ್ಯಂಡಿಬಾಡಿ) ಮಟ್ಟಗಳು ಕಡಿಮೆಯಾಗುತ್ತಿದ್ದಂತೆ, ಮೂರನೇ ಅಲೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಪ್ರತಿಕಾಯಗಳ ಮಟ್ಟವು ಕುಸಿದರೆ, ಮೂರನೇ ಅಲೆ ಬರಬಹುದು. ಆದರೆ ನಡೆಯುತ್ತಿರುವ ಲಸಿಕೆ ಅಭಿಯಾನವು ವೈರಸ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತದೆ. ನಮ್ಮ ರೋಗನಿರೋಧಕ ಶಕ್ತಿ ಶೇಕಡಾ 70 ಕ್ಕಿಂತ ಹೆಚ್ಚಿದ್ದರೆ, ಆ ಗುಂಪಿನಲ್ಲಿ ಕೋವಿಡ್ -19 ರ ಪರಿಣಾಮವು ಕಡಿಮೆಯಾಗುತ್ತದೆ ಎಂದು ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಹೇಳಿದ್ದಾರೆ.