ಹೊಸದಿಲ್ಲಿ: ದೇಶದಲ್ಲಿ ಭಾರೀ ಏರಿಕೆ ಕಂಡಿದ್ದ ಕೋವಿಡ್ 19 ಸೋಂಕಿನ ಎರಡನೇ ಅಲೆ ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೆಲವೇ ವಾರಗಳ ಅಂತರದಲ್ಲಿ ಮೂರನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎನ್ನುತ್ತಾರೆ ತಜ್ಞರು.
ದೆಹಲಿಯ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಅವರು ಎನ್ ಡಿಟಿವಿ ಗೆ ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.
“ನಾವು ಅನ್ ಲಾಕ್ ಮಾಡಲು ಪ್ರಾರಂಭಿಸಿದಂತೆ, ಮತ್ತೆ ಕೋವಿಡ್ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿಲ್ಲ. ಮೊದಲ ಮತ್ತು ಎರಡನೆಯ ಅಲೆಯ ನಡುವೆ ಏನಾಯಿತು ಎಂಬುದನ್ನು ನಾವು ಕಲಿತಂತೆ ಕಾಣುತ್ತಿಲ್ಲ. ಮತ್ತೆ ಜನಸಂದಣಿ ಹೆಚ್ಚುತ್ತಿದೆ, ಜನರು ಸೇರುತ್ತಿದ್ದಾರೆ” ಎಂದರು.
ಇದನ್ನೂ ಓದಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 60,753 ಕೋವಿಡ್ ಪ್ರಕರಣ ಪತ್ತೆ, 2,495 ಸಾವು
ಮೂರನೇ ಅಲೆ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಕಾಣಿಸಿಕೊಳ್ಳಬಹುದು. ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಮೂರನೇ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಡಾ.ಗುಲೇರಿಯಾ ಹೇಳಿದರು.
ಸೂಕ್ತ ಮುನ್ನೆಚ್ಚರಿಕೆ ಮತ್ತು ಜನಸಂದಣಿಯನ್ನು ತಡೆಯುವಲ್ಲಿ ನಾವು ಹೇಗೆ ಸಫಲವಾಗುತ್ತೇತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ” ಎಂದು ಅವರು ಹೇಳಿದರು.