Advertisement
ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೂ ಕೆಲವರಿಗೆ ಸೋಂಕು ಬಂದಿದೆ. ಬರುವುದಿಲ್ಲವೆಂದು ನಾವು ಹೇಳಿಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ. ಮುಂದೆ ಬರುವ ಮೂರನೇ ಅಲೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸುಧಾಕರ್ ಹೇಳಿದರು.
Related Articles
Advertisement
ನಮ್ಮ ಐಎಎಸ್, ಐಪಿಎಸ್, ನೋಡಲ್ ಅಧಿಕಾರಿ, ಸ್ವಸ್ಥ ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಾರೆ. ಬೆಂಗಳೂರಿಗೆ ಸೀಮಿತವಾಗಿ ಪ್ರತೀ ವಾರ್ಡಿಗೆ ಹೆಚ್ಚುವರಿ ಒಂದು ಆಂಬ್ಯುಲೆನ್ಸ್ ಮೀಸಲಿಡುತ್ತೇವೆ. 49 ಆಂಬ್ಯುಲೆನ್ಸ್ ಶ್ರದ್ಧಾಂಜಲಿ ಆಂಬ್ಯುಲೆನ್ಸ್ ಆಗಿ ಪರಿವರ್ತನೆ ಮಾಡುತ್ತೇವೆ. ನಾಲ್ಕು ಜನ ಅಧಿಕಾರಿಗಳು ದೊಡ್ಡ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಸುಧಾಕರ್ ವಿವರಿಸಿದರು.
ರಾಜ್ಯದಲ್ಲಿ ರೆಮಿಡಿಸೀವರ್ ಕೊರತೆಯಿಲ್ಲ. ಇದರ ಹೊರತಾಗಿ ಖರೀದಿಗೆ ಪ್ರಕ್ರಿಯೆ ಆರಂಭವಾಗಿದೆ. ಆಕ್ಸಿಜನ್ ಮುಖ್ಯವಾಗಿದ್ದು, ಸಿಎಂ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಸೂಚನೆ ನೀಡಿದ್ದಾರೆ. ಜಂಬೂ ಸಿಲಿಂಡರ್‌ಗಳನ್ನು, ಕಮರ್ಷಿಯಲ್ ಆಕ್ಸಿಜನ್ ಪಡೆಯಲು ಒಡಂಬಡಿಕೆಯಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ವಹಿಸಿದ್ದೇವೆ. ಜಿಲ್ಲಾ ಆಸ್ಪತ್ರೆಯಲ್ಲಿ ಟೆಂಡರ್ ಕರೆದಿದ್ದು,ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಿದ್ದೇವೆ ಎಂದರು.
ರೋಗದ ಲಕ್ಷಣ ಇದ್ದರೆ ಶೀಘ್ರವೇ ಟೆಸ್ಟ್ ಮಾಡಬೇಕು. 24 ಗಂಟೆಯೊಳಗೆ ರಿಪೋರ್ಟ್ ಬರಬೇಕು. ಈಗ ಕೆಲವೆಡೆ ಬರದಿರುವುದನ್ನು ಗಮನಿಸಿದ್ದೇನೆ. ಶೀಘ್ರವೇ ನೀಡಲು ಸೂಚಿಸುತ್ತೇನೆ ಎಂದು ಸುಧಾಕರ್ ಹೇಳಿದರು.