ಇದು ಟೆಲಿಫೋನ್ ಬೂತ್ ಮಾದರಿಯಲ್ಲಿ ತೋರುತ್ತದೆ. ಒಳಭಾಗದಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬಂದಿ ಕುಳಿತು ಸೋಂಕಿತರ ಗಂಟಲು ದ್ರವವನ್ನು ಸಂಗ್ರಹಿಸುತ್ತಾರೆ. ಎರಡೂ ಕೈಗಳನ್ನು ಪೂರ್ಣವಾಗಿ ಮುಚ್ಚುವ ಗ್ಲೌಸ್‌ಗಳನ್ನು ಧರಿಸಿ, ಗಂಟಲು ದ್ರವ ಸಂಗ್ರಹಿಸಬೇಕು. ಮತ್ತೆ ಗ್ಲೌಸ್‌ಗೆ ಕ್ರಿಮಿನಾಶಕ ಸಿಂಪಡನೆ ಮಾಡಿದರೆ ಸಾಕು. ಕಿಯೋಸ್ಕ್ ಒಳಗೆ ಕುಳಿತು ಕೆಲಸ ಮಾಡುವವರು ಸೋಂಕಿತರ ನೇರ ಸಂಪರ್ಕಕ್ಕೆ ಬರುವುದಿಲ್ಲ. ಗ್ಲೌಸ್‌ಗಳನ್ನು ಶುದ್ಧೀಕರಿಸಿ ಮರುಬಳಕೆಗೂ ಅವಕಾಶವಿದೆ.
Advertisement
ಕೋವಿಡ್ ಆಸ್ಪತ್ರೆಗಳಲ್ಲಿ ಈ ಕಿಯೋಸ್ಕ್ ಬೇಕಾಗುತ್ತದೆ. ಬೆಂಗಳೂರು, ಮಂಗಳೂರಿನಲ್ಲಿದ್ದು, ಉಡುಪಿಯಲ್ಲೂ ಇದರ ಅಗತ್ಯ ಮನಗಂಡು ಭಾರತೀಯ ವೈದ್ಯ ಸಂಘದ (ಐಎಂಎ) ಉಡುಪಿ ಕರಾವಳಿ ಶಾಖೆ ಎರಡು ಕಿಯೋಸ್ಕ್ಗಳನ್ನು ಮಾರೂರ್ ಅಲ್ಯೂಮೀನಿಯಂ ಆ್ಯಂಡ್ ಇಂಟೀರಿಯರ್ ಸಂಸ್ಥೆಯಿಂದ ಮಾಡಿಸಿದೆ. ಎರಡು ಕಿಯೋಸ್ಕ್ಗಳ ಒಟ್ಟು ವೆಚ್ಚ 1 ಲಕ್ಷ ರೂ.
ಕಿಯೋಸ್ಕ್ ಬಳಕೆಯಿಂದ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪೆ¾ಂಟ್ (ಪಿಪಿಇ) ಅವಲಂಬನೆ ಕಡಿಮೆ ಆಗುತ್ತದೆ. ಗಂಟಲು ದ್ರವ ಸಂಗ್ರಹದಲ್ಲಿ ಇದು ಉಪಯೋಗಿ. ಕೋವಿಡ್ ನಿರ್ಮೂಲನೆ ಬಳಿಕವೂ ಸಾರ್ಸ್, ಇನ್‌ಫೂÉಯೆಂಜಾ ಮೊದಲಾದ ವೈರಾಣು ಸೋಂಕಿನ ಸಂದರ್ಭ ಕಿಯೋಸ್ಕ್ ಉಪಯೋಗಕ್ಕೆ ಬರಲಿದೆ ಎನ್ನುತ್ತಾರೆ ಐಎಂಎ ಕಾರ್ಯದರ್ಶಿ ಡಾ| ಪ್ರಕಾಶ್ ಭಟ್.