Advertisement

ಕೋವಿಡ್ ಸೋಂಕು ಪರೀಕ್ಷೆ ಫ‌ಲಿತಾಂಶ 30 ನಿಮಿಷದಲ್ಲಿ!

02:13 AM Jun 16, 2020 | Hari Prasad |

ಭಾರತದಲ್ಲೀಗ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಜನರನ್ನು ಪರೀಕ್ಷೆಗೊಳಪಡಿಸುವ ಅವಶ್ಯಕತೆಯೂ ಎದ್ದು ಕಾಣುತ್ತಿದೆ.

Advertisement

ಕಾಕತಾಳೀಯವೆಂಬಂತೆ, ಕೊರಿಯಾದ ಎಸ್‌ಡಿ ಬಯೋಸೆನ್ಸರ್‌ ಎಂಬ ಕಂಪನಿ, ಕೇವಲ 30 ನಿಮಿಷಗಳಲ್ಲಿ ಕೋವಿಡ್ ಸೋಂಕು ದೃಢಪಡಿಸುವ ಆ್ಯಂಟಿಜೆನ್‌ ಕಿಟ್‌ ಒಂದನ್ನು ತಯಾರಿಸಿದೆ.

ಗುರುಗ್ರಾಮ ಹರ್ಯಾಣದ ಮನೇಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯ ಹೊಸ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌), ಏಮ್ಸ್‌ ಒಪ್ಪಿಗೆಯೂ ಸಿಕ್ಕಿದೆ.

ವಿಶೇಷತೆಗಳೇನು?
– ಸಾಮಾನ್ಯವಾಗಿ ಕೋವಿಡ್ ಟೆಸ್ಟ್‌ನಲ್ಲಿ ಬಳಸಲಾಗುವ ಆ್ಯಂಟಿ ಬಾಡಿ ಟೆಸ್ಟ್‌ ಇಲ್ಲಿ ಅವಶ್ಯಕವಿಲ್ಲ.

– ಆ್ಯಂಟಿ ಬಾಡಿ ಸಂಖ್ಯೆ ಗುರುತಿಸಲು ಸಿರೆಂಜ್‌ನಲ್ಲಿ ರಕ್ತದ ಸ್ಯಾಂಪಲ್‌ ಪಡೆಯುವ ಪ್ರಮೇಯವಿಲ್ಲ.

Advertisement

– ಮೂಗಿನ ದ್ರವವನ್ನು ಸಂಗ್ರಹಿಸುವ ಅವಶ್ಯಕತೆಯೂ ಇಲ್ಲ.

– ಗರ್ಭಧಾರಣೆ ಕಿಟ್‌ನಂತೆಯೇ ಇದರ ಉಪಯೋಗವೂ ಸರಳ.

– ಕಿಟ್‌ನಲ್ಲಿನ ಸಾಮಗ್ರಿಗಳನ್ನು ಉಪಯೋಗಿಸಿ ಶಂಕಿತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಬಹುದು.

– ಕೇವಲ 2-3 ಹನಿ ಗಂಟಲು ದ್ರವವನ್ನು ಕಿಟ್‌ನೊಂದಿಗೆ ಬರುವ ಸ್ಟ್ರಿಪ್‌ ಮೇಲೆ ಹಾಕಿ ಫ‌ಲಿತಾಂಶ ಪಡೆಯಬಹುದು.

ಕಿಟ್‌ ಪರೀಕ್ಷೆಯೇ ಅಂತಿಮವೇ?
ತಜ್ಞ ವೈದ್ಯರ ಪ್ರಕಾರ, ಕಿಟ್‌ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂತೆಂದರೆ ಮತ್ತೂಂದು ಸುತ್ತಿನ ಕೋವಿಡ್ ಪರೀಕ್ಷೆ ನಡೆಸುವ ಹಾಗಿಲ್ಲ. ಆದರೆ, ನೆಗೆಟಿವ್‌ ಬಂದರೆ ಮತ್ತೂಮ್ಮೆ ಖಚಿತಪಡಿಸಿಕೊಳ್ಳಲು ಆರ್‌-ಪಿಸಿಆರ್‌ ಪರೀಕ್ಷೆ ಮಾಡಿಸಬೇಕು.

30 ನಿಮಿಷ: ಖಚಿತ ಫ‌ಲಿತಾಂಶ ಸಿಗುವ ಕಾಲಾವಧಿ
93.3% 100% : ಫ‌ಲಿತಾಂಶದ ಖಚಿತತೆ
50.6% 84%: ಕಿಟ್‌ನ ಸೆನ್ಸಿಟಿವಿಟಿ

Advertisement

Udayavani is now on Telegram. Click here to join our channel and stay updated with the latest news.

Next