Advertisement

ಎರಡು ವಾರಕ್ಕೊಮ್ಮೆ ಕೋವಿಡ್‌ ಟೆಸ್ಟ್ ‌ಕಡ್ಡಾಯ

03:44 PM Oct 05, 2020 | Suhan S |

ಮೈಸೂರು: ನಗರದ ಮಾರುಕಟ್ಟೆಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು ಕೋವಿಡ್‌ ಲಕ್ಷಣ ಇರಲಿ ಅಥವಾ ಇಲ್ಲದಿರಲಿ ಕಡ್ಡಾಯವಾಗಿ 2 ವಾರಗಳಿಗೊಮ್ಮೆ ಕೋವಿಡ್‌ ಟೆಸ್ಟ್‌ಮಾಡಿಸಿಕೊಳ್ಳಲೇಬೇಕು ಎಂದು ಆದೇಶಿಸಿರುವ ಪಾಲಿಕೆ ಆಯುಕ್ತರು, ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳದಿರುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಮಾರುಕಟ್ಟೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ನಗರದ 22ಕೇಂದ್ರಗಳಲ್ಲಿಪಾಲಿಕೆ ಹಾಗೂಆರೋಗ್ಯಇಲಾಖೆ ವತಿಯಿಂದ ಉಚಿತವಾಗಿ ಕೋವಿಡ್‌ ಪರೀಕ್ಷೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೈಸೂರು ನಗರದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಪಾಲಿಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ ಬೀದಿಬದಿ ವ್ಯಾಪಾರಸ್ಥರು ಮತ್ತು ಮಾರುಕಟ್ಟೆ ವ್ಯಾಪಾರಸ್ಥರ ಆರೋಗ್ಯದ ಹಿತದೃಷ್ಟಿಯಿಂದಲೂ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವ್ಯಾಪಾರಸ್ಥರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ Ûದಿದ್ದಲ್ಲಿ ಅವರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಅವರು ವ್ಯಾಪಾರ ಮಾಡಲು ಮುಂದಾದರೆ ಅವರ ವಿರುದ್ಧ ಪೊಲೀಸ್‌ ಇಲಾಖೆಯ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೈಸೂರಿನ ದೇವರಾಜ, ವಾಣಿವಿಲಾಸ್‌, ಮಂಡಿ ಹಾಗೂ ಗಾಂಧಿನಗರ ಮಾರುಕಟ್ಟೆ ವ್ಯಾಪಾರಸ್ಥರಿಗೆ ಕೋವಿಡ್‌ ಟೆಸ್ಟ್ ಮಾಡಿಸುವ ಸಲುವಾಗಿ ನಗರ ಪಾಲಿಕೆಯು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದೆ.

ದೇವರಾಜ ಮಾರುಕಟ್ಟೆಯ ಸಂಪೂರ್ಣ ಮೇಲುಸ್ತುವಾರಿ ವಲಯ ಕಚೇರಿ-2ರಕಂದಾಯಾಧಿಕಾರಿ ಅರಸುಕುಮಾರಿ (8310192876), ಸಿಬ್ಬಂದಿಯಾಗಿ ದ್ವಿತೀಯದರ್ಜೆ ಸಹಾಯಕ ಬಲರಾಮ (72645 80528), ವಾಣಿವಿಲಾಸ ಮಾರುಕಟ್ಟೆಯ ಮೇಲುಸ್ತುವಾರಿಯಾಗಿ ವಲಯ ಕಚೇರಿ-6ರ ಸಹಾಯಕ ಕಂದಾಯಾಧಿಕಾರಿ ಸಿದ್ದರಾಜು (9663369134), ಸಿಬ್ಬಂದಿಯಾಗಿ ದ್ವಿತೀಯದರ್ಜೆ ಸಹಾಯಕ ಸಿದ್ದರಾಜು (9448433981), ಗಾಂಧಿ ನಗರ ಮತ್ತು ಮಂಡಿ ಮಾರುಕಟ್ಟೆ ಮೇಲುಸ್ತುವಾರಿಯಾಗಿ ವಲಯ ಕಚೇರಿ-6ರ ಕಂದಾಯಾಧಿಕಾರಿ ಆಶಾ (8861042695), ಸಿಬ್ಬಂದಿಯಾಗಿ ದ್ವಿತೀಯ ದರ್ಜೆ ಸಹಾಯಕ ನಂದ ಕುಮಾರ್‌ (9035345501) ಅವರನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next