ಮಂಡ್ಯ: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ 2ನೇ ಹಂತದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿಯೂ 2ನೇ ಹಂತದ ಅಲೆ ಪ್ರಾರಂಭವಾಗಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ವಸತಿ ನಿಲಯಗಳಿಗೆ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ರಾಜ್ಯಕ್ಕೆಭೇಟಿ ನೀಡುವ ಪ್ರವಾಸಿಗರುಕಡ್ಡಾಯವಾಗಿ ಆರ್‌ಟಿಪಿಸಿಆರ್‌ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್. ಪಿ. ಮಂಚೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾವಿಡಿಯೋ ಸಂವಾದದ ನಂತರ ಮಾತನಾಡಿದ ಅವರು, ಕೇರಳ ಹಾಗೂ ಮಹಾರಾಷ್ಟ್ರದಿಂದರಾಜ್ಯಕ್ಕೆ ಭೇಟಿ ನೀಡುವವರು 72 ಗಂಟೆಯ
ಮೊದಲೇ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆಇದ್ದರೆ ಮಾತ್ರ ಪ್ರವೇಶ ಮಾಡಬೇಕು ಎಂಬಆರೋಗ್ಯ ಸಚಿವ ಡಾ. ಸುಧಾಕರ್ ಅವರು ಆದೇಶ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಂತರ ಕಾಪಾಡಿಕೊಳ್ಳಿ: ಎಲ್ಲರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು. ಹೆಚ್ಚಾಗಿ ಹೋಟೆಲ್ ಇತರ ಸಮಾರಂಭಗಳಲ್ಲಿ ಎಚ್ಚರಿಕೆಯಿಂದ ಇದ್ದರೆ 2ನೇ ಹಂತದ ಕೋವಿಡ್-19 ಅಲೆ ತಡೆಗಟ್ಟಬಹುದುಎಂಬ ಆರೋಗ್ಯ ಸಚಿವರ ಸಲಹೆಯಂತೆವಿಚಾರವನ್ನು ಎಲ್ಲರ ಗಮನಕ್ಕೆ ತರಲು ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಲಸಿಕೆಯಲ್ಲಿ ಮಂಡ್ಯಕ್ಕೆ 4ನೇ ಸ್ಥಾನ: ಉಪವಿಭಾಗಧಿಕಾರಿ ಶಿವನಂದಮೂರ್ತಿ ಮಾತನಾಡಿ, ಮೊದಲನೇ ಹಂತದ ಲಸಿಕೆ ಪಡೆದ ಕೋವಿಡ್-19 ಫಲಾನುಭವಿಗಳ ಜಿಲ್ಲಾವಾರು ಪ್ರಗತಿಯಲ್ಲಿ ಮಂಡ್ಯ ಜಿಲ್ಲೆಯು ಶೇ.74ರಷ್ಟು ಪ್ರಗತಿ ಸಾಧಿಸಿ, ರಾಜ್ಯದಲ್ಲಿ 4ನೇ ಸ್ಥಾನದಲಿತ್ತು. 2ನೇ ಹಂತದ ಕೋವಿಡ್-19 ಲಸಿಕೆ ಪಡೆದ ಫಲಾನುಭವಿಗಳ ಪ್ರಗತಿಯಲ್ಲಿ ಮಂಡ್ಯ ಜಿಲ್ಲೆಯು
ಶೇ.100ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ವಿಡಿಯೋ ಸಂವಾದದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಸೋಮ ಶೇಖರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು.