Advertisement
ಡೆಲ್ಟಾ ವೈರಸ್ ಆಘಾತಕ್ಕೆ ಒಳಗಾಗಿರುವ ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಒಂದು ವಾರ ಕಾಲ ದಿನವೂ ಪರೀಕ್ಷೆಗೆ ಒಳಪಡುವಂತೆ ನಿಯಮ ರೂಪಿಸಲು ಜಪಾನ್ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಸದ್ಯದ ನಿಯಮದ ಪ್ರಕಾರ, ಜಪಾನ್‌ಗೆ ತೆರಳುವ ಮುನ್ನ ಎಲ್ಲ ಕ್ರೀಡಾಪಟುಗಳು ನಾಲ್ಕು ದಿನಗಳ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿದೆ. ಆದರೆ ಇದೀಗ ಕೆಲವು ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ಸೋಂಕಿನ ಪ್ರಕರಣಗಳು ಕಂಡುಬಂದಿದೆ. ಜತೆಗೆ ಜಪಾನ್‌ಗೆ ಬಂದ ಉಗಾಂಡ ಕೋಚ್ ಒಬ್ಬರಲ್ಲಿ ಈ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಪಾನ್ ಸರಕಾರ ಹೊಸ ನಿಯಮ ರೂಪಿಸಲು ಮುಂದಾಗಿದೆ. ಇದನ್ನೂ ಓದಿ :ಮನುಷ್ಯನ ಮಲದಲ್ಲಿದೆ 50 ಸಾವಿರಕ್ಕೂ ಹೆಚ್ಚು ವೈರಸ್! ಹೊಸ ಸಂಶೋಧನೆಯಿಂದ ಬಹಿರಂಗ
Related Articles
Advertisement