Advertisement

ಎಲರನ್ನೂ ಕೋವಿಡ್‌ ಟೆಸ್ಟ್ ಗೆ ಒಳಪಡಿಸಿ

04:50 PM Sep 29, 2020 | Suhan S |

ಮಲೇಬೆನ್ನೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್‌ 19 ತಪಾಸಣಾ ಕೇಂದ್ರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆ ಆಗುತ್ತಿದೆ. ಅದರಬಗ್ಗೆ ಪರಿಶೀಲನೆ ನಡೆಸಲು ಬಂದಿರುವುದಾಗಿ ತಿಳಿಸಿದರು.

Advertisement

ಕೋವಿಡ್‌ ಮಾದರಿ ಸಂಗ್ರಹ ಕಡಿಮೆಯಾಗುತ್ತಿದೆ. ಯಾಕೆ ಕಡಿಮೆಯಾಗುತ್ತಿದೆ ಎಂದು ತಿಳಿಯಲು ಕೋವಿಡ್‌ ಸ್ಯಾಂಪಲ್‌ ಸಂಗ್ರಹ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಕೆಲವು ಕೇಂದ್ರಗಳಲ್ಲಿ ಅಧಿಕಾರಿಗಳು ಸರಿಯಗಿ ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಯನಿರ್ವಹಿಸದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗುವುದು ಎಂದರು.

ಸ್ಯಾಂಪಲ್‌ಗ‌ಳ ಸಂಗ್ರಹ ಕಡಿಮೆಯಾಗುತ್ತಿದೆ ಎಂದರೆ ನಮ್ಮಲ್ಲಿ ಸೋಂಕು ಕಡಿಮೆಯಾಗಿದೆ ಎಂದು ಅರ್ಥವಲ್ಲ. ಆಸ್ಪತ್ರೆಗೆ ಬರುವ ಎಲ್ಲರನ್ನೂಕೋವಿಡ್‌ ಟೆಸ್ಟ್‌ಗೆ ಒಳಪಡಿಸಬೇಕಿದೆ. ಪ್ರತಿ ಕೇಂದ್ರಕ್ಕೂ ಸುಮಾರು 100 ಸ್ಯಾಂಪಲ್‌ ಸಂಗ್ರಹದ ಟಾರ್ಗೆಟ್‌ ನೀಡಿದ್ದೇವೆ. ಆದರೂ ನಿಗ ತ ಸಂಖ್ಯೆಯಲ್ಲಿ ಸ್ಯಾಂಪಲ್‌ಗ‌ಳ ಸಂಗ್ರಹವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕೇಂದ್ರದಲ್ಲಿ ಕೆಲವು ಎನ್‌ಎಚ್‌ಎಂ ಹೊರಗುತ್ತಿಗೆಯಲ್ಲಿರುವ ನೌಕರರು ಮುಷ್ಕರಕ್ಕೆ ಹೋಗಿದ್ದಾರೆ. ಅದ್ದರಿಂದ ಸ್ಯಾಂಪಲ್‌ಗ‌ಳ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಮುಷ್ಕರಕ್ಕೆ ಹೋಗಿರುವ ನೌಕರರು ಇಂದು ಸಂಜೆಯೊಳಗೆ ಕೆಲಸಕ್ಕೆ ಹಾಜರಾಗದಿದ್ದರೆ ಅವರನ್ನು ವಜಾಗೊಳಿಸಿ ಬೇರೆಯವರನ್ನು ತೆಗೆದುಕೊಳ್ಳುವಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ ಅವರಿಗೆ ಸೂಚಿಸಿದರು.

ಮಲೇಬೆನ್ನೂರಿನಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಸ್ಯಾಂಪಲ್‌ಗ‌ಳ ಸಂಗ್ರಹ ಮಾಡಬಹುದಾಗಿದೆ. ಇಲ್ಲಿ ಎರಡು ತಂಡಗಳನ್ನು ನೇಮಿಸಿ ಎಂದು ಸ್ಥಳದಲ್ಲಿದ್ದ ತಾಲೂಕು ಆರೋಗ್ಯಾ ಧಿಕಾರಿ ಡಾ| ಚಂದ್ರಮೋಹನ್‌ಗೆ ತಿಳಿಸಿದರು.

Advertisement

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್‌ ಆರ್‌. ರವಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಹಿರಿಯ ಆರೋಗ್ಯಾಧಿಕಾರಿ ಉಮೇಶ್‌, ಆರ್‌ಐ ಸಮೀರ್‌ ಆಹ್ಮದ್‌, ಎಎಸ್‌ಐ ಬಸವರಾಜ್‌, ಮಲ್ಲಿಕಾರ್ಜುನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next