Advertisement
ನಗರದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯನ್ನೂ ಎಲ್ಲ ಕಡೆ ತೀವ್ರವಾಗಿ ಮಾಡುತ್ತಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹೆಚ್ಚು ಜನ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ಕೋವಿಡ್ ಮಹಾಮಾರಿ ತುಮಕೂರುತಾಲೂಕಿನಲ್ಲಿಯೇ ಹೆಚ್ಚು ಸೋಂಕಿತರು ಇರುವುದುಕಂಡು ಬಂದಿದೆ. ಅದರಲ್ಲಿಯೂ ತುಮಕೂರುನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.
Related Articles
Advertisement
3 ದಿನವಾದರೂ ವರದಿ ಬಂದಿಲ್ಲ :
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಕೋವಿಡ್ ಸೋಂಕುಲಕ್ಷಣ ಇರುವವರು ಹಾಗೂ ಸಾಮಾನ್ಯ ಜನ ಒಂದೇ ಕಡೆ ನಿಲ್ಲಬೇಕು. ಇಲ್ಲಿ ಸಿಬ್ಬಂದಿ ಕಡಿಮೆ ಇದ್ದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಇಲ್ಲಿ ಪರೀಕ್ಷೆಗೆ ಬರುವವರ ಮೂಗು ಮತ್ತು ಗಂಟಲಿನ ದ್ರವ ಸಂಗ್ರಹಣೆ ಮಾಡುವುದು ತಡವಾಗುತ್ತಿದೆ.ನಗರದ ವಿವಿಧಕಡೆಗಳಲ್ಲಿ ಕೋವಿಡ್ ಪರೀಕ್ಷೆಗೆ ನೀಡಿದರೆ ಅದರಮಾಹಿತಿಯೇ ಬರುತ್ತಿಲ್ಲ ಎಂದು ಸಾರ್ವಜನಿಕರುದೂರುತ್ತಿದ್ದು, ಇಲ್ಲಿಯ ಶಾಂತಿನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ನೀಡಿ ಮೂರುದಿನವಾದರೂ ವರದಿ ಬಂದಿಲ್ಲ. ಜಿಲ್ಲಾಡಳಿತ ಮಾದರಿ ನೀಡಿ ಒಂದು ದಿನಕ್ಕೇ ವರದಿ ಬರುತ್ತಿದೆ ಎಂದು ಹೇಳುತ್ತಿದೆ. ಆದರೆ, ನಾಲ್ಕು ದಿನವಾದರೂ ಮಾಹಿತಿ ಬರದೇ ಇರುವುದರಿಂದ ಕೋವಿಡ್ ಸೋಂಕು ಮಾದರಿಯ ಲಕ್ಷಣ ಇರುವವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ನನಗೆ ಜ್ವರ, ತಲೆ ನೋವು ಬೇರೆ ಆಸ್ಪತ್ರೆಗೆ ತೋರಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ವರದಿತೋರಿಸಿ ಎಂದು ಹೇಳುತ್ತಾರೆ. ನಾನು ಮೂರು ದಿನದ ಹಿಂದೆ ಶಾಂತಿನಗರದಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಇನ್ನು ವರದಿ ಬಂದಿಲ್ಲ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಈಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. –ಜಿ.ಆರ್.ರಾಜಣ್ಣ, ನಾಗರಿಕ
– ಚಿ.ನಿ.ಪುರುಷೋತ್ತಮ್