Advertisement

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

07:53 AM May 14, 2021 | Team Udayavani |

ಮೂಡುಬಿದಿರೆ: ತಾಲೂಕು ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿಗಳ ಸಭೆಯು ಗುರುವಾರ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷ ತೆಯಲ್ಲಿ ಜರಗಿತು.

Advertisement

ಲಸಿಕೆ ಲಭ್ಯ ಇರುವಾಗ ಜನರು ಕೊಂಚ ಹಿಂದೇಟು ಹಾಕಿದ‌ಂತಿತ್ತು. ಈಗ ಜನ ಲಸಿಕೆಗಾಗಿ ಮುಗಿಬೀಳುತ್ತಿದ್ದಾರೆ. ಹಾಗಾಗಿ ಪೂರೈಕೆಗೆ ಕಷ್ಟವಾಗುತ್ತಲಿದೆ. ಆದರೂ ಆದಷ್ಟು ಶೀಘ್ರವಾಗಿ ಲಸಿಕೆ ಪೂರೈಸಲು ಸರಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕರು ಭರವಸೆ ನೀಡಿದರು. ‌ ಕಾರ್ಯಪಡೆಯ ಸದಸ್ಯರು ಈ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಬೇಕಾಗಿದೆ ಎಂದರು.

ಮೂಡುಬಿದಿರೆ ತಾಲೂಕಾಗಿದೆ. ಆದರೆ ತಾಲೂಕು ಆಸ್ಪತ್ರೆ ಸ್ಥಾಪನೆ ಆಗಿಲ್ಲದ ಕಾರಣ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಉಳಿದ ತಾಲೂಕು ಆಸ್ಪತ್ರೆಗಳಿಗೆ ಲಭಿಸುವಂತೆ ಮೂಡುಬಿದಿರೆ ಸಮುದಾಯ ಆಸ್ಪತ್ರೆಗೆ ಲಸಿಕೆ ಪೂರೈಸಲಾಗುತ್ತಿಲ್ಲ . ಆದರೂ ಈ ದಿಸೆಯಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶಾಸಕರು ಹೇಳಿದರು.

ಒಂದೆರಡು ದಿನಗಳಲ್ಲೇ ಮೂಡುಬಿದಿರೆಯ‌ ಸ್ಕೌಟ್ಸ್  ಗೈಡ್ಸ್ ಕನ್ನಡ ಭವನದಲ್ಲೂ ಸ್ವಾಬ್ ಟೆಸ್ಟಿಂಗ್ ಘಟಕ ಸ್ಥಾಪಿಸುವುದಾಗಿ ಶಾಸಕರು ಪ್ರಕಟಿಸಿದರು.

200 ಬೆಡ್ ಗಳಿಗೆ ಸಿದ್ಧತೆ

Advertisement

ಮೂಡಬಿದಿರೆಯ ಎಲ್ಲ ಸರಕಾರಿ ಹಾಸ್ಟೆಲ್ ಗಳು ಹಾಗೂ  ಕನ್ನಡ ಭವನದಲ್ಲಿ 350 ಬೆಡ್ ಗಳನ್ನು(ಆಮ್ಲಜನಕ ಸಿಲಿಂಡರ್ ಹೊರತು) ಸಿದ್ಧಪಡಿಸುವುದಾಗಿ ಪ್ರಭಾರ ತಹಶೀಲ್ದಾರ್ ಡಾ. ವೆಂಕಟೇಶ್ ನಾಯಕ್ ತಿಳಿಸಿದರು.

ಕಾರ್ಯಪಡೆಯ ಸದಸ್ಯರ ಗೈರು

23 ಪುರಸಭಾ ಸದಸ್ಯರ ಪೈಕಿ ಪಕ್ಷಬೇಧ ಮರೆತು 9 ಮಂದಿ ಗೈರುಹಾಜರಾಗಿದ್ದು 12 ಗ್ರಾಮ‌ಪಂಚಾಯತ್ ಮಟ್ಟದ ಸಮಿತಿಗಳ ಪ್ರಮುಖರೂ ಗೈರುಹಾಜರಾಗಿರುವುದನ್ನು ಶಾಸಕರು ಗಮನಿಸಿ, “ಇದು  ತಮಾಶೆ ಯ ಸಂಗತಿ ಅಲ್ಲ.  ಜೀವ, ಜೀವನದ ಪ್ರಶ್ನೆ. ಆಸಕ್ತಿ ಇದ್ದವರನ್ನು ಮಾತ್ರ ಸೇರಿಸಿಕೊಳ್ಳಿ’ ಎಂದು ಕೊಂಚ‌ ಗರಂ ಆಗಿಯೇ ಹೇಳಿದರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ, ಬಳಸಿದ ಮಾಸ್ಕ್ ಗಳನ್ನು ಕಸದೊಂದಿಗೆ ಬೆರೆಸಬೇಡಿ. ಕಾರ್ಮಿಕರ ಆರೋಗ್ಯಕ್ಕೆ ಅಪಾಯಕಾರಿ ಆಗುವುದು. ಅದೇ ರೀತಿ ತ್ಯಾಜ್ಯ ವಿಲೇವಾರಿ ಗೆ ಅನುಕೂಲ‌ವಾಗುವಂತೆ ಹಸಿ ಕಸ, ಒಣಕಸ. ಎಂದು ವಿಂಗಡಿಸಿ ಕೊಡಿ ಎಂದು ವಿನಂತಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಒಯ್ಯಲು ಯಾರೂ ಬರುತ್ತಿಲ್ಲ. ಪ್ರತ್ಯೇಕ ವಾಗಿ ಆ್ಯಂಬ್ಯೂಲೆನ್ಸ್ ‌ಬೇಕಾಗಿದೆ ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು.ಈ ಬಗ್ಗೆ ತಾನು ಗಮನಹರಿಸುವುದಾಗಿ ಶಾಸಕರು ತಿಳಿಸಿದರು.

ಇದನ್ನೂ ಓದಿ:ಕೋವಿಡ್ ಹಿನ್ನೆಲೆ : ತಂಬಾಕು ಮಾರಾಟ-ಬಳಕೆ ನಿಷೇಧ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಹೋದವರ್ಷದಂತೆ ಅಂಗಡಿ ಗಳ ಮುಂಭಾಗದಲ್ಲಿ ವೈಯಕ್ತಿಕ ಅಂತರ ಕಾಪಾಡಲು  ಬಿಳಿ ಬಣ್ಣದ ವೃತ್ತಗಳನ್ನು ಕೂಡಲೇ ಚಿತ್ರಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ತಿಳಿಸಿ ದರು.

‌ವಾರಾಂತ್ಯದಲ್ಲಿ ಹೇರಲಾಗುವ ಕರ್ಫ್ಯೂ‌ನಿಂದಾಗಿ ಸೋಮವಾರ‌ ಪೇಟೆಯಲ್ಲಿ, ಪುರಸಭಾ ಮಾರುಕಟ್ಟೆಯಲ್ಲಿ ಗ್ರಾಹಕರ ಒತ್ತಡ ತೀವ್ರವಾಗಿ ಕೋವಿಟಗ ಗಿಂತಲೂ ಮಹಾಮಾರಿ ಬಂದರೂ ಆಶ್ಚರ್ಯವಿಲ್ಲ ಎಂದು ತರಕಾರಿ ವ್ಯಾಪಾರಿ ಯೋರ್ವರು ತನ್ನ ಅನಿಸಿಕೆ ವ್ಯಕ್ತಪಡಿಸಿದಾಗ ಆ ಬಗ್ಗೆ ಪೊಲೀಸ್ ನಿರೀಕ್ಷಕರೂ ಶಾಸಕರೂ ಸ್ವಲ್ಪಮಟ್ಟಿಗೆ ಸಹಾನುಭೂತಿ ತೋರಿದರು. ಆದರೆ ಜಿಲ್ಲಾಧಿಕಾರಿಯವರ , ಸರಕಾರದ ಗಮನ ಸೆಳೆಯಬೇಕಾಗಿದೆ, ಆ ನಿಟ್ಟಿನಲ್ಲಿ‌ ಖಂಡಿತಾ ಪ್ರಯತ್ನ ‌ಮಾಡು‌ವೆ ಎಂದರು .

ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಹೆಲ್ಪ್ ಲೈನ್ ಆಗಿ ಸಿದ್ಧಪಡಿಸಿರುವ 9632187159 ಅಥವಾ ಎಂದಿನಂತೆ 08258-236236 ಇವುಗಳನ್ನು ಕೋವಿಡ್ ಸಂಬಂಧಿ ಪ್ರಕರಣಗಳ ಸಂದರ್ಭ ಬಳಸಬಹುದು ಎಂದು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಪ್ರಕಟಿಸಿದರು.

ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ದಯಾವತಿ ಅ‌ವರು ಮಾತನಾಡಿ ಈ ಬಾರಿ 522 ಕೋವಿಡ್ ಪಾಸಿಟಿವ್ ಪ್ರಕರಣ ಗಳು ದಾಖಲಾಗಿವೆ;_447 ಮಂದಿ ಹೋಂ ಐಸೋಲೇಶನ್ ನಲ್ಲಿದ್ದು75 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದರು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ, ಎಪಿಎಂಸಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ವೇದಿಕೆಯಲ್ಲಿದ್ದರು.

ಹಿರಿಯ ವಕೀಲ ಕೆ ಆರ್ ಪಂಡಿತ್, ಪುರಸಭೆ, ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಗಳು, ಅಂಗನವಾಡಿ ಮೇಲ್ವಚಾರಕರು, ಆಶಾ ಕಾರ್ಯಕರ್ತೆಯರು  ಬೀಟ್ ಪೊಲೀಸ್ , ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷ ರು ಪಾಲ್ಗೊಂಡಿದ್ದರು. ಪಡುಮಾರ್ನಾಡು ಪಿಡಿಓ ಸಾಯೀಶ್ ಚೌಟ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next