Advertisement

ರೂಪಾಂತರಿತ ಕೋವಿಡ್ ವೈರಾಣು ಕಲ್ಚರ್‌ ಯಶಸ್ವಿ

11:48 PM Jan 02, 2021 | Team Udayavani |

ಹೊಸದಿಲ್ಲಿ: ಕೊರೊನಾ ವೈರಾಣುವಿನ ಬ್ರಿಟನ್‌ ರೂಪಾಂತರಿತ ತಳಿಯನ್ನು ನಿಯಂತ್ರಿತ ವಾತಾವರಣದಲ್ಲಿ ಬೆಳೆಸುವ (ಕಲ್ಚರ್‌) ಪ್ರಯತ್ನ ಯಶಸ್ವಿ ಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ಶನಿವಾರ ಹೇಳಿದೆ.

Advertisement

ಈ ಸಾಧನೆ ನಮ್ಮಲ್ಲಿಯೇ ಪ್ರಥಮ, ಬೇರಾವುದೇ ದೇಶ ಇದರಲ್ಲಿ ಯಶಸ್ವಿಯಾಗಿಲ್ಲ ಎಂದು ಐಸಿಎಂಆರ್‌ ಹೇಳಿದೆ. “ರೂಪಾಂತರಿತ ವೈರಾಣುವನ್ನು ಎಲ್ಲ ಗುಣಲಕ್ಷಣಗಳ ಸಹಿತ ಪ್ರತ್ಯೇಕಿಸಿ ರಾಷ್ಟ್ರೀಯ ವೈರಾಣು ಇನ್‌ಸ್ಟಿಟ್ಯೂಟ್‌ (ಎನ್‌ಐವಿ)ನಲ್ಲಿ ಕಲ್ಚರ್‌ ಮಾಡಲಾಗಿದೆ’ ಎಂದು ಐಸಿಎಂಆರ್‌ ಹೇಳಿಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next