Advertisement

ಚೀನದ ವುಹಾನ್‌ ಮಾರುಕಟ್ಟೆಯಿಂದಲೇ ಕೋವಿಡ್ ಹರಡಿದ್ದು!

09:07 PM Jul 27, 2022 | Team Udayavani |

ನವದೆಹಲಿ: 2019ರ ಡಿಸೆಂಬರ್‌ನಲ್ಲಿ ಚೀನದಲ್ಲಿ ಮೊದಲು ಪತ್ತೆಯಾಗಿ ನಂತರ ವಿಶ್ವವನ್ನೆಲ್ಲ ಆವರಿಸಿಕೊಂಡು 64 ಲಕ್ಷ ಮಂದಿಯ ಸಾವಿಗೆ ಕಾರಣವಾದ; ಕೊರೊನಾ ವೈರಸ್‌ ನಿಜವಾಗಿಯೂ ಹುಟ್ಟಿದ್ದೆಲ್ಲಿಂದ? ಎರಡು ಹೊಸ ಅಧ್ಯಯನಗಳ ಪ್ರಕಾರ, ಚೀನದ ವುಹಾನ್‌ನಲ್ಲಿನ ಮಾರುಕಟ್ಟೆಯಿಂದಲೇ ಜನರಿಗೆ ಹರಡಿದೆ.

Advertisement

ಅರ್ಥಾತ್‌ ಅಲ್ಲಿನ ಪ್ರಾಣಿಗಳಿಂದ ಉದ್ಯೋಗಿಗಳಿಗೆ ಮೊದಲು ತಗುಲಿ, ಅನಂತರ ಎಲ್ಲರನ್ನೂ ವ್ಯಾಪಿಸಿಕೊಂಡಿದೆ. ವುಹಾನ್‌ ಮಾರುಕಟ್ಟೆಯಲ್ಲಿ ಜೀವಂತ ಪ್ರಾಣಿಗಳನ್ನು ಮಾರಲಾಗುತ್ತದೆ. ಹಿಂದೆಯೂ ಕೆಲವು ವೈರಸ್‌ಗಳು ಪ್ರಾಣಿಗಳಲ್ಲೇ ಮೊದಲು ಕಾಣಿಸಿಕೊಂಡಿದ್ದವು. ಈ ಸಂಶೋಧನೆಯಿಂದ ವುಹಾನ್‌ ಪ್ರಯೋಗಾಲಯದಲ್ಲಿ ವೈರಸ್‌ ಅನ್ನು ಹುಟ್ಟಿಸಲಾಗಿದೆ ಎಂಬ ಅಭಿಪ್ರಾಯಗಳಿಗೆ ಹಿನ್ನಡೆಯಾಗಿದೆ.

ಈ ರೀತಿಯ ಒಂದು ನಿಷ್ಕರ್ಷೆಗೆ ಕಾರಣ ಸೈನ್ಸ್‌ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡ ಸಂಶೋಧನೆ. ಸಂಶೋಧನಾ ವರದಿಯ ಸಹ ಲೇಖಕ, ಸ್ಕ್ರಿಪ್ಸ್‌ ರೀಸರ್ಚ್‌ ಸಂಸ್ಥೆಯ ಇಮ್ಯುನಾಲಜಿ ಆ್ಯಂಡ್‌ ಮೈಕ್ರೊಬಯಾಲಜಿ ವಿಭಾಗದ ಪ್ರೊಫೆಸರ್‌ ಕ್ರಿಸ್ಟಿಯನ್‌ ಆ್ಯಂಡರ್ಸನ್‌ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಅರಿಜೋನ ವಿವಿಯ ಜೀವಶಾಸ್ತ್ರಜ್ಞ ಮೈಕೆಲ್‌ ವೊರೊಬಿ, ಚೀನ ವಿಜ್ಞಾನಿಗಳು ನೀಡಿದ ಮಾಹಿತಿಗಳನ್ನು ಪರಿಶೀಲಿಸಿ ಇಂತಹದ್ದೇ ಅಭಿಪ್ರಾಯ ನೀಡಿದ್ದಾರೆ.

ಭಾರತದಲ್ಲಿ ಕೊರೊನಾ:
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,313 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,39,38,764ಕ್ಕೇರಿದೆ. ಸಮಾಧಾನಕರ ಸಂಖ್ಯೆಯೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,026ಕ್ಕಿಳಿದಿದೆ. ಅಂದರೆ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next