Advertisement
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಮೂಲಕವೇ ಉತ್ತೇಜನಗೊಂಡಿದ್ದ ಪುಷೊ³àದ್ಯಮಕ್ಕೆಈ ಬಾರಿ ಕೂಡ ಕೊರೊನಾಘಾತವಾಗಿದೆ. ಪುಷ್ಪಬೆಳೆ ನಂಬಿ ಕೃಷಿ ಮಾಡಿದ್ದ ರೈತರು ಈಗ ಸ್ವತಃಮುದುಡುವಂತಾಗಿದೆ.ಮಲ್ಲಿಗೆ, ಗುಲಾಬಿ, ಕಾಕಡ, ಅದರಲ್ಲೂಗ್ಲಾಡಿಯೋಲಸ್ ಹೂವುಗಳು ಒಂದಕ್ಕಿಂತ ಒಂದುಚೆಂದ. ಅದನ್ನು ದೂರದ ಬೆಂಗಳೂರು, ಮಂಗಳೂರು,ದೆಹಲಿ, ಹೈದರಾಬಾದ್‌ಗಳಿಗೆ ಕಳಿಸಿ ವಹಿವಾಟುನಡೆಸುತ್ತಿದ್ದರು.
Related Articles
Advertisement
ಕೃಷಿ ಕ್ಷೇತ್ರದಲ್ಲೇ ಅವುಉಳಿದಿದೆ. ಈ ವರ್ಷ ಅರ್ಧದಷ್ಟು ಅರ್ಧ ದರಕ್ಕೆಮಾರಿದ್ದೂ ಸಾಹಸವೇ ಎನ್ನುತ್ತಾರೆ. ಪ್ರಗತಿಪರ ರೈತಮಹಾಬಲೇಶ್ವರ ಹೆಗಡೆ ಸುರಗಿಕೊಪ್ಪ.ಭಟ್ಕಳ ಮಲ್ಲಿಗೆ, ಕಾಕಡ, ಜಿಲ್ಲೆಯ ವಿವಿಧೆಡೆಬೆಳೆಯುವ ಗುಲಾಬಿ ಇತರ ಪುಷೊ³àದ್ಯಮಕ್ಕೂ ಇದೇಏಟಾಗಿದೆ. ದೇವಸ್ಥಾನಗಳಿಗೂ ಭಕ್ತರ ಕೊರತೆ ಈಗಅವುಗಳ ಪ್ರವೇಶ ಕೂಡ ಇಲ್ಲದ ಕಾರಣದ ಹೂವುಗಳುಮಾರಾಟ ಕೂಡ ಆಗದೇ ಬಾಡುತ್ತಿವೆ.
ಮದುವೆಮುಂಜಿಗಳೂ ಇಲ್ಲ, ಅಲ್ಲಿ ಇಲ್ಲಿ ಆಗೋ ಮದುವೆಗೆಜನರ ನಿರ್ಬಂಧ ಕೂಡ ಇರುವದರಿಂದ ಪುಷ್ಪಕೇಳ್ಳೋರಿಲ್ಲ ಎನ್ನುತ್ತಾರೆ ವರ್ತಕರು.ಕಳೆದ ವರ್ಷ ಲಾಕ್‌ಡೌನ್ ಆದಾಗ ರಾಜ್ಯ ಸರಕಾರಪುಷ್ಪ ಬೆಳೆಗಾರರಿಗೆ ಆದ ನಷ್ಟಕ್ಕೆ ಪರಿಹಾರ ಘೋಷಣೆಮಾಡಿತ್ತು. ಆದರೆ, ಈ ಪರಿಹಾರ ಕೊಡಲು ಪಹಣಿಯಲ್ಲಿಪುಷ್ಪ ಬೇಸಾಯ ಎಂದು ದಾಖಲೆ ಇಲ್ಲ ಎಂದು ಕೊಟ್ಟೇಇಲ್ಲ. ಇದು ಹಿಂಗಾರಿ ಬೇಸಾಯ ಆಗಿರುವುದರಿಂದಇದನ್ನು ಪಹಣಿಯಲ್ಲಿ ಉಲ್ಲೇಖವಿರಲಿಲ್ಲ.
ಪರಿಹಾರಮಾತ್ರ ಗಗನ ಕುಸುಮವೇ ಆಗಿತ್ತು!ಈ ಮಧ್ಯೆ ಜಿಲ್ಲೆಯ ಪುಷ್ಪ ಸಮಸ್ಯೆ ಕುರಿತು ರಾಜ್ಯಮಟ್ಟದ ಅತ್ಯುತ್ತಮ ಪುಷ್ಪ ಕೃಷಿಕ ಪ್ರಶಸ್ತಿ ಪಡೆದಮಹಾಬಲೇಶ್ವರ ಹೆಗಡೆ ಅವರು ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಅವರಲ್ಲಿ ಹೂವಿನ ಬೆಳೆಗಾರರಸಮಸ್ಯೆ ಗಮನಕ್ಕೆ ತಂದಿದ್ದಾರೆ. ಈ ಬೆಳೆಯ ದಾಖಲೆಪಹಣಿಯಲ್ಲಿ ಸೇರದೇ ಇರುವುದು ಸರಕಾರದಿಂದನೆರವು ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂದೂತಿಳಿಸಿದ್ದಾರೆ.
ಈ ಬಗ್ಗೆ ಏನು ಮಾಡಬಹುದು ಎಂದುಯೋಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಕಾಗೇರಿನೀಡಿದ್ದಾರೆ.ನೋಡಲು ಚೆಂದದ ಪುಷ್ಪಗಳಿಗೆ ಈಗ ಬೇಡಿಕೆ ಇಲ್ಲದೇಬಾಡುತ್ತಿರುವ ಕೃಷಿಕರಿಗೆ ಏಟಾಗಿದೆ. ಲಕ್ಷಾಂತರ ರೂ.ವ್ಯಯಿಸಿ ಹಾಕಿದ ಬಂಡವಾಳವೂ ವಾಪಸ್ ಬಾರದೇಇದ್ದಾಗ ಮಮ್ಮಲ ಮರಗುವುದೊಂದೇ ದಾರಿಯಾಗಿದೆ.ಮುಂದಿನ ವರ್ಷ ಈ ಕೃಷಿ ಮಾಡಬೇಕಾ ಬೇಡವಾಎಂಬ ಆಲೋಚನೆ ಮಾಡುವಷ್ಟು ಈ ಅತಂತ್ರತೆತಲೆಬಿಸಿ ಮಾಡಿಸಿದ್ದಂತೂ ಸುಳ್ಳಲ್ಲ.