Advertisement

ಕೋವಿಡ್ 19: ಗಂಟಲ ದ್ರವ ಮಾದರಿ ಸಂಗ್ರಹ ಕಿಯಾಸ್ಕ್ ಕೊಡುಗೆ

08:57 AM Apr 21, 2020 | Hari Prasad |

ಗಂಗಾವತಿ: ಕೋವಿಡ್-19 ರೋಗ ಲಕ್ಷಣವಿರುವ ವ್ಯಕ್ತಿಗಳ ಗಂಟಲ ದ್ರವ ಮಾದರಿ ಸಂಗ್ರಹ ಬೂತ್ ನ್ನು ಯುವ ಕಾಂಗ್ರೆಸ್ ಮುಖಂಡ ಅಸೀಫ್ ಅಲಿ ಅವರು ಸರಕಾರಿ ಉಪ ವಿಭಾಗ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದಾರೆ.

Advertisement

ಕೋವಿಡ್-19 ರೋಗ ಲಕ್ಷಣಗಳಿರುವ ಜನರ ಗಂಟಲು ದ್ರವ ಸಂಗ್ರಹ ಮಾಡುವ ಸಂದರ್ಭದಲ್ಲಿ ವೈದ್ಯರು ಪ್ರಯೋಗಾಲಯದ ಸಿಬ್ಬಂದಿ ಮಾದರಿ ಸುರಕ್ಷಿತ ಬೂತ್ ನಲ್ಲಿ ನಿಂತು ವೈಜ್ಞಾನಿಕ ರೀತಿಯಲ್ಲಿ ಕೈಗಳಿಗೆ ಗ್ಲೌಸ್ ಮತ್ತು ಮುಖಕ್ಕೆ ರಕ್ಷಾ ಕವಚ ಧರಿಸಿ ಗಂಟಲು ದ್ರವ ಸಂಗ್ರಹ ಮಾಡುವುದರಿಂದ ವೈದ್ಯರು ಮತ್ತು ಸಿಬ್ಬಂದಿಯವರಿಗೆ ಕೋವಿಡ್-19 ರೋಗದ ಸೋಂಕು ತಗಲುವ ಭಯ ಇರುವುದಿಲ್ಲ.

ಯುವ ಕಾಂಗ್ರೆಸ್ ಮುಖಂಡ ಅಸೀಫ್ ಅಲಿ ಹಾಗೂ ಗೆಳೆಯರು ಇದನ್ನು ಕೊಡುಗೆಯಾಗಿ ನೀಡಿದ್ದು ಇದಕ್ಕೆ45 ಸಾವಿರ ರೂಪಾಯಿ ವೆಚ್ಚ ತಗುಲಿದೆ. ಕೋವಿಡ್ ವೈರಸ್ ನಿಯಂತ್ರಣ ಮಾಡಲು ಎಲ್ಲರೂ ಜಾತಿ-ಮತಗಳ ಬೇಧವಿಲ್ಲದೆ ಸರಕಾರದ ಜತೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಅಸಿಫ್ ಆಲಿ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಈ ಹೋರಾಟದಲ್ಲಿ ವೈದ್ಯರು ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು ಹೋಂಗಾರ್ಡ್ಸ್ ಮತ್ತು ಪೊಲೀಸರು ಯೋಧರಂತೆ ಕೆಲಸ ಮಾಡುತ್ತಿದ್ದು ಅವರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವುದು ಎಲ್ಲ ಕರ್ತವ್ಯ. ತಾವು ಗೆಳೆಯರೆಲ್ಲಾ ಸೇರಿಕೊಂಡು ಗಂಟಲು ದ್ರವ ಸುರಕ್ಷಿತ ಸಂಗ್ರಹ ಕಿಟ್ ವಿತರಿಸಿದ್ದು ಸರ್ವರೂ ಕೋವಿಡ್-19 ಹೋರಾಟದಲ್ಲಿ ಕೈಜೋಡಿಸುವಂತೆ ಅಸೀಫ್ ಅಲಿ ಅವರು ಉದಯವಾಣಿಯ ಮೂಲಕ ಜನತೆಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next