Advertisement

ವಿದೇಶಿ ಪ್ರಯಾಣಿಕರಿಗೆ ಕೋವಿಡ್ ವರದಿ ಕಡ್ಡಾಯ

12:33 PM Dec 24, 2020 | Suhan S |

ಬೆಂಗಳೂರು: ರೂಪಾಂತರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್ ಸೋಂಕು ಪರೀಕ್ಷಾ ವರದಿ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಹೊರ ದೇಶಗಳಿಂದ ರಾಜ್ಯ ಬೆಂಗಳೂರು ಮತ್ತು ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರುಮತ್ತು ಕಾರವಾರಬಂದರುಗಳಿಗೆ ಆಗಮಿಸುವವರು ಪ್ರಯಾಣ ಆರಂಭಕ್ಕೂ72 ಗಂಟೆ ಒಳಗೆ ನಡೆಸಿರುವ ಕೋವಿಡ್ ಸೋಂಕು ಪರೀಕ್ಷಾ ವರದಿಯನ್ನುಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಪರೀಕ್ಷಾ ವರದಿ ಇಲ್ಲದವರು ವಿಮಾನ ನಿಲ್ದಾಣದಲ್ಲಿಯೇ ಲಭ್ಯವಿರುವ ಪರೀಕ್ಷಾ ಕೇಂದ್ರದಲ್ಲಿ ಉಚಿತ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕಿದೆ. ಎಕ್ಸ್‌ಪ್ರೆಸ್‌ ಪರೀಕ್ಷೆಗೂ ಅವಕಾಶವಿದ್ದು, ಶುಲ್ಕ ಪಾವತಿಸಬೇಕಾಗುತ್ತದೆ. ಪರೀಕ್ಷಾ ವರದಿಬರುವವರೆಗೂ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಇನ್ನುನಿಲ್ದಾಣ ಮತ್ತು ಬಂದರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ವಿಮಾನ ನಿಲ್ದಾಣ ಪ್ರಾಧಿಕಾರ ಜತೆಗೂಡಿ ಪ್ರಯಾಣಿಕರ ತಪಾಸಣೆಮತ್ತುಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇಂಗ್ಲೆಂಡ್‌ನಿಂದ ಬಂದವರಿಗೆ ಕಡ್ಡಾಯ ಪರೀಕ್ಷೆ :

ಬೆಂಗಳೂರು: ಇಂಗ್ಲೆಂಡ್‌ನಿಂದ ಡಿ.21ರಿಂದ23ರವರೆಗೆ ಭಾರತಕ್ಕೆ ಬಂದಿರುವ ಪ್ರಯಾಣಿಕರಿಗೆ ರಾಜ್ಯ ವಿಮಾನ ನಿಲ್ದಾಣಮತ್ತು ಬಂದರಿನಲ್ಲಿಕಡ್ಡಾಯ ಕೋವಿಡ್ ಆರ್‌ ಟಿಪಿಸಿಆರ್‌ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಪ್ರಮಾಣಿತ ಕಾರ್ಯಚರಣೆ ವಿಧಾನ (ಎಸ್‌ಒಪಿ) ಹೊರಡಿಸಿದೆ.

ಪ್ರಯಾಣಿಕರು ಪರೀಕ್ಷಾ ವರದಿಯನ್ನು ತಂದಿದ್ದರೂ ಮತ್ತೂಮ್ಮೆ ಪರೀಕ್ಷೆ ನಡೆಸಬೇಕಿದೆ. ವರದಿ ಪಾಸಿಟಿವ್‌ ಬಂದರೆಅವರ ಗಂಟಲು ಮಾದರಿಯನ್ನು ವಂಶವಾಹಿನಿ ಪರೀಕ್ಷೆಗೆ ಎನ್‌ಸಿಬಿಎಸ್‌ ಅಥವಾ ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಬೇಕು. ಆ ಸೋಂಕಿತರಿಗೆ ಹೋಂ ಕ್ವಾರಂಟೈನ್‌ ಅವಕಾಶವಿಲ್ಲ. ಜಿಲ್ಲಾಡಳಿತ, ಬಿಬಿಎಂಪಿ ಪ್ರತ್ಯೇಕ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕ್ರಮ ಕೈಗೊಳ್ಳಬೇಕು.ನೆಗೆಟಿವ್‌ ಬಂದರೆ ಕಡ್ಡಾಯ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಇರಬೇಕು ಎಂದು ತಿಳಿಸಲಾಗಿದೆ.

Advertisement

ಒಂದು ವೇಳೆ ವಂಶವಾಹಿನಿ ಪರೀಕ್ಷೆ ಫ‌ಲಿತಾಂಶದಲ್ಲಿ ಬ್ರಿಟನ್‌ ರೂಪಾಂತರ ಕೋವಿಡ್ ವೈರಾಣು ಎಂದು ಪತ್ತೆಯಾದರೆ ಮುಂದಿನ 14 ದಿನಗಳವರೆಗೂಆಸ್ಪತ್ರೆಯ ಐಸೋಲೇಷನ್‌ ಯುನಿಟಿನಲ್ಲಿಡಬೇಕು. ಆ ನಂತರಮತ್ತೂಮ್ಮೆ ಪರೀಕೆ Ò ನಡೆಸಿ ನೆಗೆಟಿವ್‌ ಬಂದರೆ ಬಿಡುಗಡೆ ಮಾಡಬಹುದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next