Advertisement
ಕಳೆದ ವರ್ಷ ಕೋವಿಡ್ ಸಂಧರ್ಭದಲ್ಲಿ ತಾಲೂಕಿನಲ್ಲಿ 112 ಜನ ಮೃತರಾಗಿದ್ದಾರೆ. ಇವರಲ್ಲಿ 49 ಜನರ ಕುಟುಂಬಕ್ಕೆ ತಲಾ 1ಲಕ್ಷ ರೂ. ಪರಿಹಾರ ಸಿಕ್ಕಿದೆ. ಇನ್ನುಳಿದ 63 ಜನ ನೊಂದ ಕುಟುಂಬಕ್ಕೆ ಕೋವಿಡ್ ಪರಿಹಾರ ಮರೀಚಿಕೆಯಾಗಿದೆ.
Related Articles
Advertisement
ತಹಸೀಲ್ದಾರ ಕಚೇರಿಯಲ್ಲಿ ವಿಚಾರಿಸಿದರೆ, ಜಿಲ್ಲಾಡಳಿತಕ್ಕೆ ಕಳಿಸಿರುವುದಾಗಿ ನೆಪ ಹೇಳುತ್ತಿದ್ದು, ಜಿಲ್ಲಾಡಳಿತ ಕಚೇರಿಯ ಸಂಬಂಧಿಸಿದ ಸಿಬ್ಬಂದಿಯನ್ನು ವಿಚಾರಿಸಿದರೆ ಕುಷ್ಟಗಿ ತಹಶೀಲ್ದಾರ ಕಚೇರಿಯತ್ತ ಬೆರಳು ಮಾಡುತ್ತಿದ್ದು, ಇವರ ಅಲೆದಾಡಿಸುವಿಕೆಗೆ ಪರಿಹಾರ ಮೊತ್ತ ಯಾವಾಗ್ಲಾದರೂ ಬರಲಿ ಎಂದು ಕೇಳುವುದನ್ನೇ ಬಿಟ್ಟಿದ್ದಾರೆ.
ಇದೇ ರೀತಿ ಕುಷ್ಟಗಿ ಯ ನಾಗಪ್ಪ ಕುರಿ, ಡೊಣ್ಣೆಗುಡ್ಡ ಗ್ರಾಮದ ದುರಗಪ್ಪ ವಾಲೀಕಾರ ಅವರ ಕುಟುಂಬ ವರ್ಗದವರು ಸೇರಿದಂತೆ ಮೊದಲಾದವರು ಕೋವಿಡ್ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ತಾಂತ್ರಿಕ ಲೋಪ ಎಲ್ಲಿ?: ಕೋವಿಡ್ ನಿಂದ ಮೃತರಾದ ಕುಟುಂಬಗಳಿಂದ ಮೃತ ಆಧಾರ ಕಾರ್ಡ, ಎಸ್.ಆರ್. ಎಫ್. ಐಡಿ ಇತ್ಯಾಧಿ ಪೂರಕ ದಾಖಲೆಗಳನ್ನು ಸ್ವೀಕರಿಸಲಾಗಿದೆ. ಸ್ವೀಕೃತ ದಾಖಲೆಗಳ ಪೈಕಿ 42 ಬಿಪಿಎಲ್ ಕಾರ್ಡದಾರ ಕುಟುಂಬಗಳು, ಎಪಿಎಲ್ 7 ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಈ ಕುಟುಂಬಗಳಿಗೆ ಇನ್ನೂ ತಲಾ 50ಸಾವಿರ ರೂ. ಕೇಂದ್ರ ಸರ್ಕಾರದಿಂದ ಬರಬೇಕಿದ್ದು ಅದರ ಬಗ್ಗೆ ಯಾವೂದೇ ಮಾಹಿತಿ ಇಲ್ಲ. ಇನ್ನೂ 63 ಕುಟುಂಗಳಿಗೆ ಪರಿಹಾರ ಪರಿಚೀಕೆಯಾಗಿದ್ದು ಇಷ್ಟು ವಿಳಂಬ ಧೋರಣೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಗಮನಿಸದೇ ಇರುವುದು ವಿಪರ್ಯಸವೆನಿಸಿದೆ. ಮಾಹಿತಿ ಪ್ರಕಾರ ದಾಖಲೆಗಳನ್ನು ಆನಲೈನ್ ನಲ್ಲಿ ನೊಂದಣಿ ವೇಳೆ ಎಸ್ ಆರ್ ಎಫ್ ಐಡಿ ಸಂಖ್ಯೆಯನ್ನು ತಪ್ಪಾಗಿ ನೊಂದಾಯಿಸಿದ್ದು, ಈ ಹಿನ್ನೆಲೆಯಲ್ಲಿ ಸದರಿ ಕುಟುಂಬಗಳು ನೀಡುವ ಎಸ್ ಆರ್ ಎಫ್ ಐಡಿ ಸಂಖ್ಯೆಗೆ ಹೊಂದಾಣಿಕೆಯಾಗದೇ ಡಾಟಾ ನಾಟ್ ಪೌಂಡ್ ಎಂದು ಬರುತ್ತಿದೆ. ಇಷ್ಟು ದಿನಗಳಾದರೂ ಎಲ್ಲಿ ಲೋಪವಾಗಿದೆ ಎಂದು ಸರಿಪಡಿಸಲಾಗಿಲ್ಲ.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ.