ಕುದೂರು: ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಹಂಚಬೇಕೆಂದು ಸಿದ್ಧಪಡಿಸಿದ್ದ ಸಾವಿರಾರು ಆಹಾರಕಿಟ್ ಗಳು ವಿತರಣೆಯಾಗದೆ ಹುಳು ಹಿಡಿದು ಹಾಳಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ನೆಡೆದಿದೆ.
ಸುಗ್ಗನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸಭಾ ಭವನದಲ್ಲಿಸಾವಿರಾರು ಆಹಾರ ಕಿಟ್ ಗಳನ್ನು ಸಂಗ್ರಹಿಸಿಡಲಾಗಿತ್ತು. ಭವನದ ಬಾಗಿಲು ಮತ್ತು ಕಿಟಕಿಯಿಂದ ಹುಳುಗಳು ಹರಿದಾಡುತ್ತಿವೆ.
ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ.ರಂಗಧಾಮಯ್ಯ ಕೋವಿಡ್ ಸಂದರ್ಭದಲ್ಲಿ ಮಾಗಡಿ ತಾಲ್ಲೂಕಿನ ಬೇರೆ ಬೇರೆ ಕಡೆ ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಬಿಜೆಪಿ ಪಕ್ಷದ ನಾಯಕರ ಪೂಟೂಗಳನ್ನು ಹಾಕಿ ಆಹಾರ ಕಿಟ್ ಗಳನ್ನು ಹಂಚಿ ನೆರವಿನ ಹಸ್ತ ಚಾಚಿದ್ದರು.ಸುಗ್ಗನಹಳ್ಳಿ ಗ್ರಾಮದ ಬಡವರಿಗೆ ಹಂಚಬೇಕೆಂದು ಸಾವಿರಾರು ದಿನಸಿ ಕಿಟ್ ಗಳನ್ನು ಸಿದ್ದಪಡಿಸಿದ್ದರು.ಆದರೆ ಆ ಪ್ರಾತ್ಯಂದ ಜನರಿಗೆ ದಿನಸಿ ಕಿಟ್ ಗಳನ್ನು ಹಂಚದ ಕಾರಣ ಅದಕ್ಕೆ ಹುಳು ಹಿಡಿದು ಹಾಳಾಗಿದೆ.
ನೆರವಿನ ನಾಟಕ ಪ್ರಚಾರಕಷ್ಟೇ ಸೀಮಿತ : ಆಹಾರ ಕಿಟ್ ಗಳ ಮೇಲೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಭಾವಚಿತ್ತಣವನ್ನು ಮುದ್ರಣ ಮಾಡಿದ್ದಾರೆ. ಅಕ್ಕಿ, ಬೇಳೆ, ರವೆ,ಸಕ್ಕರೆ,ಕೂಲ್ ಡ್ರಿಂಕ್ಸ್ ಇಂತಹ ಅನೇಕ ಉಪಯೋಗಿ ವಸ್ತುಗಳು ಬಡವರಿಗೆ ಯಾವುದೇ ಪ್ರಯೋಜನ ಕ್ಕೆ ಬಾರದೆ ಹಾಳಾಗಿ ದೆ.
ಆಹಾರ ಇಲ್ಲಿ.ಹೆಗ್ಗಣಗಳ ಪಾಲು: ಸುಗ್ಗನಹಳ್ಳಿ ಗ್ರಾಮದಲ್ಲಿ ರಂಗಧಾಮಯ್ಯನವರೇ ನಿರ್ಮಾಣ ಮಾಡಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸಭಾ ಭವನದಲ್ಲಿ ಕೂಳೆಯುತ್ತಿದೆ. ಸಭಾಭವನದಲ್ಲಿ ಅನ್ನದಾನ ನೆಡೆಯುತ್ತಿತ್ತು. ಕೋವಿಡ್ ಹಿನ್ನಲೆ ಕಳೆದ ಮೂರು ವರ್ಷಗಳಿಂದ ಅನ್ನದಾನವೂ ನಿಂತು ಹೋಯಿತು. ಇದರಿಂದಾಗಿ ಸಮಯದಾಯ ಭವನದಲ್ಲಿ ಬೀಗ ತಗಿಯುವ ಕೆಲಸ ಮಾಡಿಲ್ಲ. ಧಾನ್ಯಗಳೇ ತುಂಬಿರುವ ಕೂಠಡಿಯಲ್ಲಿ ಹುಳುಗಳ ಹರಿದಾಟದ ಜೊತೆಗೆ ಇಲ್ಲಿ. ಹೆಗ್ಗಣಗಳು ಕೂಡ ಕಟ್ಟಡದ ಗೋಡೆ ಗಳನ್ನು ಕೂರೆದು ಒಳ ಬರುತ್ತಿವೆ. ಇದನ್ನು ಕಂಡ ಗ್ರಾಮಸ್ಥರು ಯೋಗ್ಯ ವಾದ ಕಿಟ್ ಗಳನ್ನು ಜನರಿಗೆ ವಿತರಿಸಲಿ ಇಲ್ಲವಾದಲ್ಲಿ ರಾಸುಗಳಿಗೆ ನೀಡಲಿ ಎಂದು ಮನವಿ ಮಾಡಿದ್ದಾರೆ.