ಬೆಂಗಳೂರು:ಕೋವಿಡ್-19 ಪರೀಕ್ಷೆಗೊಳಪಡದಿದ್ದರೂ ಮೊಬೈಲ್ ನಂಬರ್ ಪಡೆಯುತ್ತಿರುವ ಬಿಬಿಎಂಪಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಪದೇ ಪದೆ ಕರೆ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವ ಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಣಿಎಂಬಮಹಿಳೆಆರೋಪಿಸಿರುವವಿಡಿಯೋದಲ್ಲಿ ಸೆ.21ರಂದು “ನಾನು ಹಾಗೂ ನನ್ನ ಸ್ನೇಹಿತರು ಮಾರು ಕಟ್ಟೆಗೆ ಹೋಗಲು ಜಯನಗರ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದೆವು. ಮೆಟ್ರೋ ಮುಂಭಾಗದಲ್ಲಿದ್ದ ಕೆಲ ಸಿಬ್ಬಂದಿ ಏಕಾಏಕಿ ಮೊಬೈಲ್ ನಂಬರ್ ಪಡೆದುಕೊಂಡು ಓಟಿಪಿ ಕಳುಹಿಸಿದರು. ಓಟಿಪಿ ನೀಡಲು ನಿರಾಕರಿಸಿದಾಗ, ಅಲ್ಲಿನ ಸಿಬ್ಬಂದಿ ಮೊಬೈಲ್ ಕಸಿದುಕೊಂಡು ಓಟಿಪಿ ಪಡೆದುಕೊಂಡಿದ್ದಾರೆ.ಕೊರೊನಾಪರೀಕ್ಷೆಗೊಳಪಡಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ, ನಾನು ಮತ್ತು ನನ್ನ ಸ್ನೇಹಿತರು ನಿರಾಕರಿಸಿದ್ದು, ನಮ್ಮ ಆರೋಗ್ಯದ ಬಗ್ಗೆ ನಮ್ಮಗೆ ಕಾಳಜಿಯಿದೆ. ಸದ್ಯ ಅಗತ್ಯವಿಲ್ಲ ಎಂದು ವಾಪಸ್ ಬಂದಿದ್ದೆವು. ಬಳಿಕ ಸ್ಯಾಂಪಲ್ ಪಡೆದುಕೊಂಡಿದ್ದೇವೆ ಎಂದು ಸಂದೇಶ ಬಂದಿದೆ.’
“ಆ ಬಳಿಕ ನಿತ್ಯ 10-20 ಕಾಲ್‌ಗಳು ಬರುತ್ತಿವೆ. ಆರೋಗ್ಯಾಧಿಕಾರಿ, ಬಿಬಿಎಂಪಿ, ಪೊಲೀಸ್, ಬಿಬಿಎಂಪಿ ಸ್ವಯಂ ಸೇವಕರು ಎಂದು ಹೇಳಿಕೊಂಡು ಕರೆ ಮಾಡುತ್ತಿದ್ದಾರೆ. ಕರೆ ಮಾಡಿದವರಿಗೆ ತಾವು ಸ್ಯಾಂಪಲ್ ಕೊಟ್ಟಿಲ್ಲ. ಆದರೂ ಯಾಕೆ ಕರೆ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದಾಗ , ಕರೆ ಮಾಡಿದ ಸಿಬ್ಬಂದಿ ಬಿಬಿಎಂಪಿಯಿಂದ ಪಟ್ಟಿಬಂದಿದೆ. ಹೀಗಾಗಿ ಕರೆ ಮಾಡಿ ವಿಚಾರಿಸುತ್ತಿದ್ದೇವೆ ಎಂದಿದ್ದಾರೆ. ಅದರಿಂದ ಆಕ್ರೋಶಗೊಂಡ ವಾಣಿ ನೇರವಾಗಿ ಸೆ.26ರಂದು ಜಯನಗರ ಮೆಟ್ರೋ ನಿಲ್ದಾಣಕ್ಕೆ ಹೋಗಿ ವಿಚಾರಿಸಿದ್ದು, ಪದೇ ಪದೇ ಕರೆ ಮಾಡುತ್ತಿರುವ ಕುರಿತು ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದಾರೆ.
ಬಿಬಿಎಂಪಿಯಿಂದ ಟಾರ್ಗೆಟ್ : ನಿತ್ಯ ಸಾಧ್ಯವಾದಷ್ಟು ಹೆಚ್ಚು ಮಂದಿಯನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಒತ್ತಡ ಹೇರುತ್ತಿದೆ. ಹೀಗಾಗಿ ಈ ರೀತಿ ಪ್ರಕರಣಗಳು ಬೆಳಕಿಗೆ ಬರಲುಕಾರಣವಾಗಿದೆ ಎನ್ನಲಾಗಿದೆ.