Advertisement

ಕೋವಿಡ್‌: ಜರ್ಮನಿಯಲ್ಲಿ ಪ್ರಸರಣ ಪ್ರಮಾಣ ಏರಿಕೆ

11:43 AM Jun 23, 2020 | mahesh |

ಫ್ರಾಂಕ್‌ಫರ್ಟ್‌: ಜರ್ಮನಿಯ ಕೋವಿಡ್‌ ವೈರಸ್‌ ಪ್ರಸರಣ ಪ್ರಮಾಣವು ರವಿವಾರ 2.88ಕ್ಕೆ ಏರಿದೆ. ಶನಿವಾರ 1.79ಕ್ಕೆ ಏರಿಕೆಯಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ವೈರಸ್‌ ಪ್ರಸರಣ ಪ್ರಮಾಣ ಏರಿರುವುದು ಯುರೋಪಿನ ಅತಿ ದೊಡ್ಡ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿರುವ ಜರ್ಮನಿಯಲ್ಲಿ ಹೊಸ ನಿರ್ಬಂಧಗಳನ್ನು ಹೇರುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ.

Advertisement

ಇದುವರೆಗೆ ಕೋವಿಡ್ ವೈರಸ್‌ ಹರಡುವಿಕೆಯನ್ನು ತಡೆಯುವಲ್ಲಿ ಮತ್ತು ಸಾವಿನ ಸಂಖ್ಯೆಯನ್ನು ತುಲನಾತ್ಮಕವಾಗಿ ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದ ಜರ್ಮನಿಗೆ ಇದೊಂದು ಬಲುದೊಡ್ಡ ಹೊಡೆತವಾಗಿದೆ. ಸಾಂಕ್ರಾಮಿಕವನ್ನು ನಿಯಂತ್ರಣದಲ್ಲಿಡಲು, ಜರ್ಮನಿಗೆ ವೈರಸ್‌ ಪ್ರಸರಣ ಪ್ರಮಾಣವು ಒಂದಕ್ಕಿಂತ ಕಡಿಮೆಯಿರಬೇಕು. ಸಾರ್ವಜನಿಕ ಆರೋಗ್ಯಕ್ಕಾಗಿ ರಾಬರ್ಟ್‌ ಕೋಚ್‌ ಇನ್‌ಸ್ಟಿಟ್ಯೂಟ್‌ ಪ್ರಕಟಿಸಿದ ಅಧ್ಯಯನ ವರದಿಯಂತೆ ವೈರಸ್‌ ಪ್ರಸರಣ ಪ್ರಮಾಣವು 2.88ರಷ್ಟಿದ್ದು, ಹೇಗೆಂದರೆ ವೈರಸ್‌ ಸೋಂಕಿಗೆ ಒಳಗಾದ 100 ಜನರಿಂದ ಇನ್ನೂ 288 ಜನರಿಗೆ ಸೋಂಕು ತಗಲಿದೆ. 7 ದಿನಗಳ ಸೋಂಕಿತರ ಪಟ್ಟಿಯ ಸರಾಸರಿಯನ್ನು ಆಧರಿಸಿ ಸೋಂಕಿನ ಪ್ರಮಾಣವು 2.03ಕ್ಕೆ ಏರಿದೆ ಎಂದು ಆರ್‌ಕೆಐ ಹೇಳಿದೆ.

ಆರ್ಥಿಕತೆಗೆ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ ರಾಜಕಾರಣಿಗಳು ಒತ್ತಡ ಹೇರಿದ ಕಾರಣ ದೇಶದಲ್ಲಿ ಇತ್ತೀಚೆಗೆ ಲಾಕ್‌ಡೌನ್‌ ಸಡಿಲಿಸಲಾಗಿತ್ತು. ಆದರೆ ಇದೀಗ ವೈರಸ್‌ ಪ್ರಸರಣ ಪ್ರಮಾಣವು ಏರಿಕೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next