Advertisement
ಇರಾಕ್‌ನ ಜನರು ಸಂಪ್ರದಾಯವೇ ಮುಖ್ಯವೆಂದು ಪ್ರತಿಪಾದಿಸುತ್ತಿದ್ದು, ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧನೆಗಳನ್ನು ನಿರಾಕರಿಸುತ್ತಿದ್ದಾರೆ. ಇದು ಸೋಂಕಿನ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ. ಅಲ್ಲಿನ ಜನರು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. 40 ರೋಗಿಗಳು ಸಂಪರ್ಕ ಸಿಗದೇ ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Related Articles
Advertisement
ವೈದ್ಯಕೀಯ ವ್ಯವಸ್ಥೆಯ ಮೇಲೆ ಇಲ್ಲಿನ ಜನತೆಗೆ ನಂಬಿಕೆ ಇಲ್ಲದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. 38 ದಶಲಕ್ಷ ಜನ ಸಂಖ್ಯೆ ಹೊಂದಿರುವ ಇರಾಕ್‌ನಲ್ಲಿ ಸೋಮವಾರ 1,352 ಸೋಂಕಿತ ಪ್ರಕರಣ ದೃಢಪಟ್ಟಿದೆ. ಇರಾಕ್‌ಗಿಂತ ಕಡಿಮೆ ಜನ ಸಂಖ್ಯೆ ಹೊಂದಿರುವ ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ನಮ್ಮಲ್ಲಿ ಪ್ರಕರಣಗಳನ್ನು ಮರೆಮಾಚಲಾಗಿದೆ. ಇಲ್ಲಿನ ಜನರು ಪರೀಕ್ಷೆಗೆ ಒಳಗಾಗಲು ಒಪ್ಪುವುದಿಲ್ಲ, ಸಂಪರ್ಕ ತಡೆ, ಮತ್ತು ಪ್ರತ್ಯೇಕತೆಗೆ ಹೆದರುತ್ತಾರೆ ಎಂದು ಉಪ ಆರೋಗ್ಯ ಸಚಿವ ಡಾ| ಹಜೀವ್ ಅಲ್ ಜುಮೇಲಿ ಹೇಳಿದರು.
ಬಾಸ್ರಾ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಮಾಸ್ಕ್ ಇಲ್ಲದೆ ಮಲಗಿರುವ ಮತ್ತು ಒಬ್ಬರು ಸಾವನ್ನಪ್ಪಿರುವ ವೀಡಿಯೋ ವ್ಯಾಪಕವಾಗಿ ಹರಿದಾಡುತ್ತಿರುವುದರಿಂದ ಜನರು ಭಯಗೊಂಡಿದ್ದಾರೆ ಎನ್ನಲಾಗಿದೆ.
32 ವರ್ಷದ ಮಹಿಳಾ ರೋಗಿಯ ಪ್ರಕರಣವನ್ನು ಅವರು ಪ್ರಸ್ತಾಪಿಸುತ್ತಾ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಈಕೆಯನ್ನು ಕೋವಿಡ್-19 ಪರೀಕ್ಷೆಗೆ ಹೋಗುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಆಕೆಯ ತಂದೆ ಮತ್ತು ಸಹೋದರರು ಪರೀಕ್ಷೆಗೆ ಹೋಗುವುದನ್ನು ನಿರಾಕರಿಸುತ್ತಾರೆ.