ರಿಪ್ಪನ್‌ಪೇಟೆ: ಕೋವಿಡ್ ಸೋಂಕು ಉಲ್ಬಣಗೊಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಸೂಚನೆ ಯಂತೆ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಅರೋಗ್ಯ ಇಲಾಖೆ ಅಶಾಅಂಗನವಾಡಿ ಗ್ರಾಮಾಡಳಿತದೊಂದಿಗೆ ಮೂರು ನಾಲ್ಕು ದಿನಗಳ ನಂತರ ರ್ಯಾಪಿಡ್ ಟೆಸ್ಟ್ ಮಾಡುವುದಾಗಿ ಗ್ರಾಪಂ ಪಿಡಿಒ ಜಿ.ಚಂದ್ರಶೇಖರ್ ತಿಳಿಸಿದರು.
ಗ್ರಾಪಂ ಸಭಾ ಭವನದಲ್ಲಿ ಅಯೋಜಿಸಲಾಗಿದ್ದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದ ಅವರು, ಮೊಬೈಲ್ ಸರ್ವಿಸ್ ಮೂಲಕ ಕೊರೊನಾ ಪತ್ತೆ
ಕಾರ್ಯ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್‌ಪೆಕ್ಟರ್ ವಿನಯ್, ಅರೋಗ್ಯ ಇಲಾಖೆಯ ಹಿರಿಯ
ಅರೋಗ್ಯ ಕಾರ್ಯಕರ್ತ ಅಮೃತೇಶ್ ಹಾಜರಿದ್ದು ಕೆಲವು ಮಾಹಿತಿಗಳನ್ನು ನೀಡಿದರು.
ಕಾರ್ಯಪಡೆಯ ಸಭೆಯಲ್ಲಿ ಕೃಷ್ಣೋಜಿ ರಾವ್, ಆರ್.ಎ. ಚಾಬುಸಾಬ್, ಡಾ| ಅಬೂಬಕರ್, ಆರ್. ರಾಘವೇಂದ್ರ, ಜಿ.ಡಿ. ಮಲ್ಲಿಕಾರ್ಜುನ, ಶೀಲಾ ಗಂಗಾನಾಯ್ಕ, ನಾಗೇಶ್ ಮೋರೆ, ಸ್ವಾತಿ, ಸರಸ್ವತಿ, ಶರಾವತಿ, ಪದ್ಮಾ ಇನ್ನಿತರರು ಇದ್ದರು.