ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಸೋಂಕು ಪಾಸಿಟಿವಿಟಿ ಪ್ರಮಾಣ ಮಂಗಳವಾರ ಶೇ.1.81ಕ್ಕೆ ಕುಸಿದಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ನಾಲ್ಕರಿಂದ ಎರಡಂಕೆಗೆ ಕೋವಿಡ್ ಸೋಂಕಿನ ಪ್ರಮಾಣ ಇಳಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ಇದಕ್ಕೆ ಯೋಗದಾನ ನೀಡಿದವರಿಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಅನೇಕ ಜನರಿಗೆ ತೊಂದರೆ ಆಗಿದೆ. ಆದರೆ ಅಂದು ವಿವಾಹ ನಿರ್ಬಂಧ ಹಾಗೂ ಕಠಿಣ ಕ್ರಮಕ್ಕೆ ಹಿಂದೇಟು ಹಾಕಿದ್ದರೆ ಕೋವಿಡ್ ನಿಯಂತ್ರಣಕ್ಕೆ ಇನ್ನೂ ಎರಡು ತಿಂಗಳು ಕಾಯಬೇಕಿತ್ತು ಎಂದರು.
ಮೂರನೇ ಅಲೆಗೆ ತಡೆಗೆ ಕ್ರಮ ಕೈಗೊಂಡಿದ್ದೇವೆ. 25 ಹೊಸ ಆ್ಯಂಬುಲೆನ್ಸ್ ಜಿಲ್ಲೆಗೆ ಬಂದಿದೆ. 88 ಡಾಕ್ಟರ್ ಬಂದಿದ್ದಾರೆ. ಹೈಟೆಕ್ ಆಸ್ಪತ್ರೆ ಇರದೇ ಇದ್ದರೂ ಎಲ್ಲ ಆಸ್ಪತ್ರೆಗಳನ್ನು ಹೈಟೆಕ್ ಮಾಡುತ್ತಿದ್ದೇವೆ ಎಂದರು.
ರಾಜ್ಯ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ. ಜಾರಕಿಹೋಳಿ ರಾಜೀನಾಮೆ ನೀಡಲ್ಲ. ಕೊಡಬಾರದು ಎಂದು ಹೇಳುತ್ತೇವೆ. ಉದ್ವೇಗದ ಭಾವನೆಯಿಂದ, ನೋವಾದಾಗ ಅದು ಶಬ್ದವಾಗಿ ಬಂದಿದೆ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ, ವಿವೇಕ ಹೆಬ್ಬಾರ, ದ್ಯಾಮಣ್ಣ ದೊಡ್ಮನಿ ಇತರರು ಇದ್ದರು