Advertisement

ಮತ್ತೆ 68 ಜಜನರಿಗೆ ಸೋಂಕು

10:17 AM Jul 26, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ತಲುಪಿದೆ. ಶನಿವಾರ ಮತ್ತೆ 68 ಜನರಿಗೆ ಸೋಂಕು ದೃಢವಾಗಿದ್ದು ಸೋಂಕಿತರ ಸಂಖ್ಯೆ 1932ಕ್ಕೆ ಏರಿಕೆಯಾಗಿದೆ.

Advertisement

ಶನಿವಾರ ಜಿಲ್ಲೆಯ ಗುರುಮಠಕಲ್‌ ಪುರಸಭೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ವಾರಿಯರ್ಸ್ ಗಳಾದ ಪೊಲೀಸ್‌ ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಪರ್ಕದಿಂದ 8 ಜನರಿಗೆ ಸೋಂಕು ತಗುಲಿದ್ದು, ನಾಲ್ವರಿಗೆ ಐಎಲ್‌ಐ ಲಕ್ಷಣಗಳು ಕಂಡು ಬಂದಿವೆ. ಯಾದಗಿರಿ ನಗರದ ಪ್ರದೇಶದ 7 ಜನ, ಗುರುಮಠಕಲ್‌ ಸಮುದಾಯ ಆರೋಗ್ಯ ಕೇಂದ್ರದ 32 ವರ್ಷದ ಪಿ-92680 ಗುರುಮಠಕಲ್‌ ಪುರಸಭೆಯ 36 ವರ್ಷದ ಪುರುಷ ಪಿ-94218, 37 ವರ್ಷದ ಪುರುಷ ಪಿ-94495, 43 ವರ್ಷದ ಮಹಿಳೆ ಪಿ-94591, 42 ವರ್ಷದ ಪುರುಷ ಪಿ-94947 ಸೇರಿದಂತೆ ಶಹಾಪುರ ಅಗ್ನಿಶಾಮಕ ಠಾಣೆಯ 31ವರ್ಷದ ಪುರುಷ ಪಿ-92193, 28 ವರ್ಷದ ಪುರುಷ ಪಿ-92774 ಅಲ್ಲದೆ ಯಾದಗಿರಿ, ಗುರುಮಠಕಲ್‌, ಶಹಾಪುರ, ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡಿದ್ದು 43 ಪುರುಷರು, 25 ಮಹಿಳೆಯರು ಕೊರೊನಾಗೆ ತುತ್ತಾಗಿದ್ದಾರೆ.

ಆರೋಗ್ಯ ಇಲಾಖೆ ಶನಿವಾರ 270 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 240 ಜನರ ವರದಿ ನೆಗೆಟಿವ್‌ ಬಂದಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3525 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5237 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 156 ಕಂಟೈನ್ಮೆಂಟ್‌ ಝೋನ್‌ ಗಳನ್ನು ರಚಿಸಲಾಗಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 160 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 55, ಸುರಪುರ 43 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ ನಲ್ಲಿ 98 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್‌. ಸೋಮನಾಳ ತಿಳಿಸಿದ್ದಾರೆ. ಮಹಿಳೆ ಸಾವು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾದವರಲ್ಲಿ ಶನಿವಾರ 55ವರ್ಷದ ಮಹಿಳೆ ಪಿ-95103 ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2 ಸಾವು ಸಂಭವಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next