ಹುಬ್ಬಳ್ಳಿ: ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಹೆದರಿ, ಮಹಿಳೆಯೊಬ್ಬರು ನೀರು ತುಂಬಿದ ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ತಾಲೂಕಿನ ಅದರಗುಂಚಿನಲ್ಲಿ ಸೋಮವಾರ ನಡೆದಿದೆ.
ಅದರಗುಂಚಿಯ ಬಸಮ್ಮ ಸಹದೇವ ಬಳ್ಳೂರ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಸೋಮವಾರ ಬೆಳಗ್ಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ವರದಿ ಬಂದಿತು ಎನ್ನಲಾಗಿದ್ದು, ಇದರಿಂದ ಹೆದರಿ ಗ್ರಾಮ ಸರಹದ್ದಿನಲ್ಲಿರುವ ಕಲ್ಲು( ಕಡಿ )ಕ್ವಾರಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ