Advertisement

ಇನ್ನು ನೆನಪು ಮಾತ್ರ… ಮಾಜಿ ರಾಷ್ಟ್ರಪತಿ, ಖ್ಯಾತ ಆರ್ಥಿಕ ತಜ್ಞ ಪ್ರಣಬ್ ಮುಖರ್ಜಿ ವಿಧಿವಶ

06:12 PM Aug 31, 2020 | Nagendra Trasi |

ನವದೆಹಲಿ: ಭಾರತದ 13ನೇ ರಾಷ್ಟ್ರಪತಿಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ  ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ (84) ಅವರ ಮೆದುಳು ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿರುವ ಘಟನೆ ಸೋಮವಾರ (ಆಗಸ್ಟ್ 31, 2020)ನಡೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೆಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಆರ್ಮಿ ರಿಸರ್ಚ್ ಮತ್ತು ರೆಫರ್ರೆಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಮುಖರ್ಜಿ ಅವರು ಟ್ವೀಟ್ ಮಾಡಿ ವಿಷಯ ಹಂಚಿಕೊಂಡು, ತನ್ನ ಸಂಪರ್ಕಕ್ಕೆ ಬಂದವರು ಐಸೋಲೇಶನ್ ಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕ್ಲರ್ಕ್ to ರಾಷ್ಟ್ರಪತಿಯವರೆಗೆ “ಪ್ರಣಬ್” ರಾಜಕೀಯ ಜೀವನಗಾಥೆ; ಕೈತಪ್ಪಿದ್ದ ಪ್ರಧಾನಿ ಪಟ್ಟ

ನಂತರ ಅವರ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ಭಾರೀ ಪ್ರಮಾಣದ ರಕ್ತವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅಲ್ಲದೇ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ನಿಗಾವಹಿಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

ಆದರೆ ಕೊನೆಗೂ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ತೀರಾ ವಿಷಮಸ್ಥಿತಿಗೆ ಹೋಗಿದ್ದು, ಇಹಲೋಕ ತ್ಯಜಿಸಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next