Advertisement

45 ದಿನಗಳಿಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳಲ್ಲಿ ಕುಸಿತ: ಬೆಸ್ಟ್‌

12:27 PM Dec 28, 2020 | Suhan S |

ಮುಂಬಯಿ, ಡಿ. 27: ಕಳೆದ 45 ದಿನಗಳಲ್ಲಿ ತನ್ನ ಸಿಬಂದಿಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣ ಕುಸಿತ ಕಂಡುಬಂದಿದ್ದು, ಆಪರೇಷನ್‌ ಝೀರೋ ಡೆತ್‌ ಕಾರಣದಿಂದಾಗಿ ಇದು ಸಾಧ್ಯವಾಗಿದೆ ಎಂದು ಬೆಸ್ಟ್‌ ಸಮೂಹ ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಇದು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಒಳಗೊಂಡಿದ್ದು, ಇತ್ತೀಚೆಗಿನ ಅಂಕಿಅಂಶಗಳ ಪ್ರಕಾರ  2,887 ಬೆಸ್ಟ್‌ ಸಿಬಂದಿಯಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಅವರಲ್ಲಿ 2,763 ಮಂದಿ ಗುಣಮುಖವಾದರೆ, ಪ್ರಸ್ತುತ 25 ಸಕ್ರಿಯ ಪ್ರಕರಣಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

5,198 ರೋಗಲಕ್ಷಣ  ರಹಿತ ಸಿಬಂದಿ ಪರೀಕ್ಷೆ :

ಕಳೆದ ಕೆಲವು ದಿನಗಳಲ್ಲಿ 57 ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಶಿಬಿರಗಳನ್ನು ವಿವಿಧ ಡಿಪೋಗಳು ಮತ್ತು ಕೆಲಸದ ಸ್ಥಳಗಳಲ್ಲಿ ಎಂಸಿಜಿಎಂ ಸಹಯೋಗದೊಂದಿಗೆ ಆಯೋ ಜಿಸಲಾಗಿತ್ತು. ಇದರ ಮೂಲಕ 5,198 ರೋಗಲಕ್ಷಣ ರಹಿತ ಸಿಬಂದಿಯನ್ನು ಪರೀಕ್ಷಿಸಲಾಯಿಗಿದೆ. ಇವರಲ್ಲಿ 32 ಮಂದಿ ಯಲ್ಲಿ  ಕೊರೊನಾ ದೃಢಪಟ್ಟಿದ್ದು, ಈಗಾಗಲೇ 25 ಸಿಬಂದಿಗೆ ಚಿಕಿತ್ಸೆ ನೀಡಲಾಗಿದೆ. ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಬೆಸ್ಟ್‌ ಸಮೂಹ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ| ಅನಿಲ್‌ ಕುಮಾರ್‌ ಸಿಂಗಲ್‌  ಶನಿವಾರ ತಿಳಿಸಿದ್ದಾರೆ.

ಚೇತರಿಕೆ ಮೇಲೆ ಉತ್ತಮ ಪರಿಣಾಮ :

Advertisement

ಕೋವಿಡ್‌ ಸೋಂಕನ್ನು ನಿಭಾಯಿಸುವಾಗ ಬೆಸ್ಟ್‌ ಸಂಸ್ಥೆಯು 40,000 ಸಿಬಂದಿಯ ಉತ್ತಮ ಆರೋಗ್ಯ ಮತ್ತು ಕ್ಷೇಮ ವಿಧಾನಕ್ಕಾಗಿ ಡಿಸೆಂಬರ್‌ ಆರಂಭದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಒ) ಮುಂಬಯಿಯ ಬೆಸ್ಟ್‌ ಅಂಡಟೇìಕಿಂಗ್‌ ಅನ್ನು ಪಡೆದುಕೊಂಡಿದೆ. ಟೆಲಿ ಮಾನಿಟರಿಂಗ್‌ ತೀವ್ರತೆಯ ಸ್ಕೋರ್‌ ವ್ಯವಸ್ಥೆಯನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದರ ಅಡಿಯಲ್ಲಿ ಬೆಸ್ಟ್‌ನ ವೈದ್ಯರು ಕೋವಿಡ್‌ ರೋಗಿಗಳ ಆರೋಗ್ಯವನ್ನು ನಿಯತಕಾಲಿಕವಾಗಿ ಐದು ನಿಮಿಷಗಳ ಕರೆಗಳ ಮೂಲಕ ಮೇಲ್ವಿಚಾರಣೆ ಮಾಡುತ್ತಾರೆ. ಇದು ಕೋವಿಡ್‌ ರೋಗಿಗಳಲ್ಲಿ ಚೇತರಿಕೆಯ ಮೇಲೆ ಉತ್ತಮಪರಿಣಾಮ ಬೀರಿದೆ. ಈ ಕ್ರಮಗಳ ಪರಿಣಾಮವಾಗಿ 2020ರ ಎಪ್ರಿಲ್‌ ಮತ್ತು ಸೆಪ್ಟಂಬರ್‌ ನಡುವೆ 2,340 ಕೋವಿಡ್‌ ಪಾಸಿಟಿವ್‌ ಸಿಬಂದಿಯಲ್ಲಿ 2,125 ಮಂದಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. ತಂಡದ ಸನ್ನದ್ಧತೆ ಮತ್ತು ಅನುಸರಣೆಗಳು ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಿದೆ ಎಂದು ಸಿಂಗಲ್‌ ಹೇಳಿದ್ದಾರೆ.

ಪ್ರತಿದಿನ 500 ಸಿಬಂದಿ ಪರೀಕ್ಷೆ  :

ಡಬ್ಲ್ಯುಎಚ್‌ಒ ಮಾನದಂಡಗಳ ಪ್ರಕಾರ ಸಂಸ್ಥೆಯಲ್ಲಿ ಶೇ. 5 ಮತ್ತು ಅದಕ್ಕಿಂತ ಕಡಿಮೆ ಪಾಸಿಟಿವ್‌ ಪ್ರಕರಣಗಳು ಉತ್ತಮ ನಿಯಂತ್ರಣದ ಸಂಕೇತವಾಗಿದೆ ಎಂದು ಬೆಸ್ಟ್‌ ಸಮೂಹ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ| ಅನಿಲ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ. ಈ ಗುರಿಯನ್ನು ಸಾಧಿಸಲು ಪ್ರತಿದಿನ ಸರಾಸರಿ 500 ಸಿಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಜತೆಗೆ 4,000ಕ್ಕೂ ಹೆಚ್ಚು ಜಾಗೃತಿ ಉಪನ್ಯಾಸಗಳನ್ನು ನಡೆಸಲಾಗಿದೆ. 1,30,000ಕ್ಕೂ ಹೆಚ್ಚು ವಿಟಮಿನ್‌ ಸಿ, ಡಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಗಳನ್ನು ಸಿಬಂದಿಗೆ ವಿತರಿಸಲಾಗಿದೆ. 2,000ಕ್ಕೂ ಹೆಚ್ಚಿನ ಅಪಾಯದ ಮತ್ತು 3,000 ಕಡಿಮೆ ಅಪಾಯದ ಸಂಪರ್ಕ ಸಿಬಂದಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next