Advertisement

ಕೋವಿಡ್ ಪಾಸಿಟಿವ್‌ ಪುತ್ರಿಯ ಭೇಟಿ-ಎಎಸ್‌ಐಗೆ ಕ್ವಾರಂಟೈನ್‌

07:20 AM May 09, 2020 | mahesh |

ಬೆಳಗಾವಿ: ಕೋವಿಡ್ ಸೋಂಕಿತೆ ಮಗಳನ್ನು ಭೇಟಿಯಾಗಲು ಹೋಗಿದ್ದ ಕೆಎಸ್‌ಆರ್‌ಪಿ ತುಕಡಿಯ ಎಎಸ್‌ಐ ಅವರನ್ನು ಪೊಲೀಸರು ಕ್ವಾರಂಟೈನ್‌ ಮಾಡಿದ್ದಾರೆ. ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಹಿರೇಬಾಗೇವಾಡಿ ಮೂಲದ ಮಗಳು ಹಾಗೂ ಅಳಿಯನನ್ನು ಭೇಟಿಯಾಗಲು ಶುಕ್ರವಾರ ಎಎಸ್‌ಐ ತೆರಳಿದ್ದರು.

Advertisement

ಅಳಿಯ-ಮಗಳಿಗೆ ಕೋವಿಡ್ ಪಾಸಿಟಿವ್‌ ಇದ್ದು, ಆದರೆ ನೆಗೆಟಿವ್‌ ವರದಿ ಬಂದಿರುವ ಒಂದೂವರೆ ವರ್ಷದ ಮೊಮ್ಮಗನನ್ನು ಕರೆತರಲು ಹೋಗಿದ್ದರು. ಇದಕ್ಕೆ ಅವಕಾಶ ನೀಡದ ಪಿಎಸ್‌ಐ ಕೂಡಲೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಎಎಸ್‌ಐ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಒಂದು ವೇಳೆ ಎಎಸ್‌ಐ ಹೊರಗಡೆ ಬಂದು ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆ ಮುಂದೆ ಭಾರೀ ಅನಾಹುತ ಆಗುವ ಸಾಧ್ಯತೆ ಇತ್ತು. ಎಎಸ್‌ಐ ಚಾಲಕ ಸೇರಿ ಯಾರ ಸಂಪರ್ಕಕ್ಕೂ ಬಂದಿಲ್ಲ. ಬೇರೊಬ್ಬರ ಸಂಪರ್ಕಕ್ಕೆ ಬರುವ ಮುನ್ನವೇ ಕ್ವಾರಂಟೈನ್ ಮಾಡುವ ಮೂಲಕ ಪೊಲೀಸರು ದಕ್ಷತೆ ಮೆರೆದಿದ್ದಾರೆ.

ಕ್ವಾರಂಟೈನ್‌ ಮಾಡಲಾಗಿರುವ ಎಎಸ್‌ಐ ನಗರದ ಚನ್ನಮ್ಮ ವೃತ್ತದಲ್ಲಿ ನಿಯೋಜಿತ ಕೆಎಸ್‌ಆರ್‌ಪಿ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ತುಕಡಿಯಲ್ಲಿ 21 ಜನರಿದ್ದಾರೆ. ಮಗಳು, ಮೊಮ್ಮಗನನ್ನು ಭೇಟಿಯಾಗಿ ಬಂದಿರುವ ವಿಷಯ ಯಾರಿಗೂ ಗೊತ್ತಾಗದಿದ್ದರೆ ಎಲ್ಲರಿಗೂ ಸಮಸ್ಯೆ ಆಗುತ್ತಿತ್ತು. ಕೂಡಲೇ ಕ್ವಾರಂಟೈನ್‌ ಮಾಡಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next