Advertisement
ಭಾನುವಾರ ಹೊತ್ತಿಗಿನ ಅಂಕಿಅಂಶಗಳನ್ನೇ ಪರಿಗಣಿಸಿದರೆ, ಈ ಏರಿಕೆಯಿಂದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು 1.13 ಕೋಟಿಗೆ ಮುಟ್ಟಿಸಿದೆ. ಇಲ್ಲಿಯವರೆಗೆ ಒಟ್ಟು 1,58,607 ಸಾವುಗಳು ಸಂಭವಿಸಿದೆ. ಇದರಲ್ಲಿ ನಿನ್ನೆ ಒಂದೇ ದಿನ ಸಂಭವಿಸಿದ 161 ಸಾವುಗಳೂ ಸೇರಿವೆ. ಕಳೆದ 44 ದಿನಗಳಲ್ಲೇ ಇದು ದಿನವೊಂದರಲ್ಲಿ ಸಂಭವಿಸಿದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿವೆ.
Related Articles
Advertisement
ಇದನ್ನೂ ಓದಿ :ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ; ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಕೇಸ್
ಗುಜರಾತ್ ಶಾಲಾ, ಕಾಲೇಜು ಸಂಕಷ್ಟದಲ್ಲಿ: ಗುಜರಾತ್‌ನ ಸೂರತ್ ನಗರದ ಎರಡು ಪ್ರಾಥಮಿಕ ಶಾಲೆಗಳು, ಒಂದು ಕಾಲೇಜನ್ನು ಎರಡು ವಾರಗಳ ಕಾಲ ಬಂದ್ ಮಾಡಲಾಗಿದೆ. ಫೆಬ್ರವರಿಯಲ್ಲಿ ಸೂರತ್ ಶಿಕ್ಷಣಸಂಸ್ಥೆಗಳನ್ನು ಮತ್ತೆ ತೆರೆಯಲಾಗಿತ್ತು. ಈ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿರುವುದರಿಂದ ಈ ಕ್ರಮಕ್ಕೆ ಅಲ್ಲಿನ ನಗರಪಾಲಿಕೆ ಮುಂದಾಗಿದೆ.
ಕಠಿಣ ಕ್ರಮದತ್ತ ಮಹಾರಾಷ್ಟ್ರ: ಮೊನ್ನೆ ಶನಿವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ 1,828, ಮುಂಬೈನಲ್ಲಿ 1709, ಪುಣೆಯಲ್ಲಿ 1,667 ಪ್ರಕರಣಗಳು ದಾಖಲಾಗಿದ್ದವು. ಇದರ ಪರಿಣಾಮ ಮಂಗಳವಾರದಿಂದ ಮಹಾರಾಷ್ಟ್ರದ ಆಯ್ದಭಾಗಗಳಲ್ಲಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ.
7 ರಾಜ್ಯಗಳಲ್ಲಿ ಶೇ. 87ರಷ್ಟು ಸೋಕಿಂತರುಕೊರೊನಾ ಪ್ರಕರಣಗಳ ಏರಿಕೆಯಲ್ಲಿ ಕರ್ನಾಟಕ ಸೇರಿ ದೇಶದ 7 ರಾಜ್ಯಗಳ ಪಾಲು ಗರಿಷ್ಠವಾಗಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶಗಳು ಸೇರಿ ಹೊಸ ಪ್ರಕರಣಗಳ ಸಂಖ್ಯೆ ಶೇ.87.73ರಷ್ಟಿದೆ.
ತೆಲಂಗಾಣದಲ್ಲಿ 228: ಶನಿವಾರ ಎಂಟು ಗಂಟೆಯಷ್ಟೊತ್ತಿಗೆ ತೆಲಂಗಾಣದಲ್ಲಿ 228 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ದೀರ್ಘಕಾಲದ ಬಳಿಕ ಸತತ ಎರಡನೇ ದಿನ 200ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿ ಆತಂಕ ಮೂಡಿಸಿದೆ.