Advertisement

ಶಿಕ್ಷಕಿಗೆ ಕೋವಿಡ್ ಪಾಸಿಟಿವ್ : ಶಾಲೆಗೆ ಸ್ಯಾನಿಟೈಸ್ ಮಾಡಿ ಶಾಲಾರಂಭಿಸಲು DDPI ಸೂಚನೆ

06:41 PM Jan 04, 2021 | Team Udayavani |

ಕೊಪ್ಪಳ: ಕೊಪ್ಪಳ ತಾಲೂಕಿನ ವದಗನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಲೆಯನ್ನು ಸ್ಯಾನಿಟೈಜರ್‌ನಿಂದ ಸಿಂಪರಣೆ ಮಾಡಿ, ಎಂದಿನಂತೆ ಮತ್ತೆ ಶಾಲೆ ಆರಂಭಿಸಲು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಶಾಲೆ ಆರಂಭದ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲ ಶಾಲಾ ಶಿಕ್ಷಕರಿಗೆ ಕೊರೊನಾ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿತ್ತು. ಅದರಂತೆ ವದಗನಾಳ ಶಾಲೆಯ ಶಿಕ್ಷಕಿ ಡಿ.೨೯ ರಂದು ಕೊರೊನಾ ಪರೀಕ್ಷೆಗೆ ಸ್ವಾಬ್ ನೀಡಿದ್ದರು. ಹೊಸ ವರ್ಷದ ಜ.೦೧ ರಂದು ಶಾಲೆಗೆ ಹಾಜರಾಗಿ ವಾಪಸ್ಸಾಗಿದ್ದರು. ಆ ಶಿಕ್ಷಕಿಯ ಕೊರೊನಾ ಪರೀಕ್ಷಾ ವರದಿ ಸೋಮವಾರ ಪಾಜಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಎಲ್ಲ ಕೊಠಡಿಗಳನ್ನು ಸ್ಯಾಜಿಟೈಜರ್‌ನಿಂದ ಸಿಂಪರಣೆ ಮಾಡಲಾಗಿದೆ.

ಇದನ್ನೂ ಓದಿ:ಭಾರತದಲ್ಲಿ ರೂಪಾಂತರಿ ಕೋವಿಡ್ ಭೀತಿ: ಒಟ್ಟು 38 ಜನರಲ್ಲಿ ಸೋಂಕು ಪತ್ತೆ

ಜ.01 ರಂದು ಆ ಶಿಕ್ಷಕಿಯು ಶಾಲೆಗೆ ಹಾಜರಾಗಿ ವಾಪಸ್ಸಾಗಿದ್ದರಿಂದ ಮಕ್ಕಳ ಪಾಲಕರಲ್ಲೂ ಆತಂಕ ಮನೆ ಮಾಡಿದೆ. ಅಂದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬಂದಿರಲಿಲ್ಲ. ಅಲ್ಲದೇ, ಪಾಜಿಟಿವ್ ಬಂದ ಶಿಕ್ಷಕಿಯೂ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆಯಿಲ್ಲ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಅವರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next