ಉಡುಪಿ: ಉಡುಪಿ ಎಸ್‌ಪಿ ಕಚೇರಿಯಲ್ಲಿರುವ ಡಿಸಿಆರ್‌ಬಿ ವಿಭಾಗದ ಮಹಿಳಾ ಸಿಬಂದಿಯೋರ್ವರಿಗೆ ಕೋವಿಡ್ ಪಾಸಿಟಿವ್ ಧೃಢವಾಗಿದೆ.
ಕೆಲವು ದಿನಗಳಿಂದ ರಜೆಯಲ್ಲಿದ್ದ ಮಹಿಳಾ ಸಿಬಂದಿ ಸೋಮವಾರ ಕೆಲಸಕ್ಕೆ ಹಾಜರಾಗಿದ್ದರು ಆದರೆ ಮಂಗಳವಾರ ಅವರಿಗೆ ಸೋಂಕು ಧೃಢವಾಗಿದ್ದು ಸದ್ಯ ಎಸ್‌ಪಿ ಕಚೇರಿಯನ್ನು ಬಂದ್ ಮಾಡಿ ಸಾನಿಟೈಸರ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಮೊದಲು ಎಸ್‌ಪಿ ಕಚೇರಿಯ ಇಬ್ಬರು ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿತು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಎಸ್ ಪಿ ಕಚೇರಿಯನ್ನು ಬಂದ್ ಮಾಡಲಾಗಿದೆ.
ಉಡುಪಿ ಕರಾವಳಿ ಬೈಪಾಸ್ ಹೋಟೆಲ್ ನ 18 ಮಂದಿ ನೌಕರರಿಗೆ ಸೋಂಕು ದೃಢ
ಮಂಗಳವಾರ ಜಿಲ್ಲೆಯಲ್ಲಿ ಹಲವಾರು ಹೊಸ ಪ್ರಕರಣಗಳು ದೃಢಪಟ್ಟಿದ್ದು ಉಡುಪಿ ಪುತ್ತಿಗೆ ಮಠದ ಶ್ರೀಗಳಿಗೂ ಇಂದು ಕೋವಿಡ್ ಸೋಂಕು ದೃಢವಾಗಿದೆ. ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಎರಡು ದಿನಗಳ ಕಾಲ ಕೋರ್ಟ್ ಸಂಕೀರ್ಣ ಸೀಲ್ ಡೌನ್ ಆಗಿರಲಿದೆ.
ಉಡುಪಿ ಕರಾವಳಿ ಬೈಪಾಸ್ ನಲ್ಲಿರುವ ಹೋಟೆಲ್ ನ 18 ಮಂದಿ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.