ಬೆಳಗಾವಿ : ರಾಜ್ಯದಲ್ಲಿ ಶಾಲಾ ಕಾಲೇಜುಗಳ ಆರಂಭಕ್ಕೆ ಸರಕಾರ ಅನುಮತಿ ನೀಡಿದ ಬೆನ್ನಲ್ಲೇ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 22 ಶಿಕ್ಷರಿಗೆ ಕೋವೀಡ್ ಸೊಂಕು ತಗಲಿದ್ದು ಮಕ್ಕಳ ಪಾಲಕರಲ್ಲಿ ಆತಂಕ ಮೂಡಿಸಿದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ 10,ಬೆಳಗಾವಿ ನಗರ ವಲಯದ 4 ,ರಾಮದುರ್ಗ ತಾಲೂಕಿನಕ್ಲಿ 3,ಕಿತ್ತೂರು ತಾಲೂಕಿನಲ್ಲಿ ಒಬ್ಬರು ಶಿಕ್ಷಕರಿಗೆ ಕೋವೀಡ್ ಸೊಂಕು ತಗಲಿದ್ದು ದೃಡವಾಗಿದೆ.
ಅದೇ ರೀತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರಿಗೆ ಕೋವೀಡ್ ಸೊಂಕು ತಗುಲಿದ ವರದಿಯಾಗಿದೆ. ರಾಯಬಾಗದ 2 ಹುಕ್ಕೇರಿಯ 2 ಶಿಕ್ಷಕರಿಗೆ ಸೊಂಕು ತಗಲಿದ್ದು ದೃಡವಾಗಿದೆ.
ಇದನ್ನೂ ಓದಿ:ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ: ಸಿಎಂ ಯಡಿಯೂರಪ್ಪ
ಶಾಲೆ ಆರಂಭವಾಗುವ ಮುನ್ನವೇ ಈ 22 ಜನ ಶಿಕ್ಷಕರಿಗೆ ಸೊಂಕು ದೃಡವಾಗಿದ್ದು,ಇವರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿಲ್ಲ,ಇವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಚಿಕ್ಕೋಡಿ ಮತ್ತು ಬೆಳಗಾವಿ ಡಿಡಿಪಿಐ ಅವರು ತಿಳಿಸಿದ್ದಾರೆ.