Advertisement

ಚಾಮರಾಜನಗರ: ಕೋವಿಡ್ ಸೋಂಕಿತ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇಶಿಗೌಡನಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ಶಿವಮ್ಮ (70) ಮೃತಪಟ್ಟ ವೃದ್ಧೆ. ಇವರ 80 ವರ್ಷದ ಪತಿಗೆ ಕೋವಿಡ್ ಸೋಂಕು ತಗುಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶಿವಮ್ಮ ಅವರಿಗೆ ಕಡಿಮೆ ರೋಗ ಲಕ್ಷಣಗಳಿದ್ದುದರಿಂದ ಹೋಂ ಐಸೋಲೇಷನ್ ನಲ್ಲಿರುವಂತೆ ಸೂಚಿಸಲಾಗಿತ್ತು.

ಶಿವಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಮನೆಯಲ್ಲೇ ಒಬ್ಬರೇ ಇದ್ದ ಅವರು ಗುರುವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next